ನವದೆಹಲಿ,ನ.14 (DaijiworldNews/HR): ಲಡಾಖ್ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ನೀಡಲಾಗುವ ಭಾರತದ ಹೇಳಿಕೆ ಮತ್ತು ಚೀನಾದ ಪ್ರತಿಹೇಳಿಕೆ ಮತ್ತು ನಿರಾಕರಣೆಗಳನ್ನು ಕಾಂಗ್ರೆಸ್ ಟೀಕಿಸಿದ್ದು, ಇದೊಂದು ಕ್ರೂರ ವ್ಯಂಗ್ಯ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಲಡಾಖ್ನ ಕೆಲ ಭಾಗದಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ ಮಾಡಿರುವ ಉಲ್ಲಂಘನೆಗೆ ಸಂಬಂಧಿಸಿದಂತೆ, ಭಾರತ ಚೀನಾದೊಂದಿಗೆ ನಡೆಸಿರುವ ಮಾತುಕತೆ ಕುರಿತು ಮೋದಿ ಸರ್ಕಾರದಿಂದ ಸ್ಪಷ್ಟನೆ ಕೇಳಿದ್ದಾರೆ. ಇನ್ನು ಗಡಿ ವಿಚಾರದಲ್ಲಿ ಎರಡೂ ರಾಷ್ಟ್ರಗಳ ನಡುವೆಯ ಯಾವುದೇ ಒಪ್ಪಂದವಾಗಿದ್ದರೆ, ಭಾರತವು ಜಂಟಿ ಹೇಳಿಕೆಗೆ ಒತ್ತಾಯಿಸಿ, ಈ ಮೂಲಕ ಮಾತ್ರ ಹೇಳಿಕೆ ಮತ್ತು ಪ್ರತಿ ಹೇಳಿಕೆ, ನಿರಾಕರಣೆಗಳ ಕ್ರೂರ ವ್ಯಂಗ್ಯವನ್ನು ಕೊನೆಗಾಣಿಸಲು ಸಾಧ್ಯ" ಎಂದು ಹೇಳಿದ್ದಾರೆ,
ಇನ್ನು ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾದೊಂದಿಗೆ ನಡೆಯುತ್ತಿರುವ ಅಂತ್ಯವಿಲ್ಲದ ಮಾತುಕತೆಗಳು ಏನು ಎಂಬುದನ್ನು ಸರ್ಕಾರ ದೇಶದ ಜನರ ಎದುರು ಬಿಚ್ಚಿಡಬೇಕು ಎಂದು ಹೇಳಿದ್ದಾರೆ.