ಚೆನ್ನೈ, ನ.14 (DaijiworldNews/PY): ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನವಿ ಹಾಗೂ ಸಾರ್ವಜನಿಕರ ಬೇಡಿಕೆಯ ಮೇರೆಗೆ ನ.16ರ ನಂತರ ಬಸ್ ಸಂಚಾರ ಸೇವೆ ಮುಂದುವರಿಸುವುದಾಗಿ ತಮಿಳುನಾಡು ಸರ್ಕಾರ ತೀರ್ಮಾನಿಸಿದೆ.
ಸಾಂದರ್ಭಿಕ ಚಿತ್ರ
ನ.16ರ ನಂತರವೂ ತಮಿಳುನಾಡು ಹಾಗೂ ಕರ್ನಾಟಕ ನಡುವೆ ಖಾಸಗಿ ಹಾಗೂ ರಾಜ್ಯ ರಸ್ತೆ ಸಾರಿಗೆ ಬಸ್ಗಳು ಸಂಚರಿಸಲಿವೆ. ತಮಿಳುನಾಡು ಸರ್ಕಾರ ಈ ವಿಚಾರವಾಗಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ ನ.16ರವರೆಗೆ ಇ-ನೋದಣಿ ಇಲ್ಲದೇ ಉಭಯ ರಾಜ್ಯಗಳ ನಡುವೆ ಅಂತರಾಜ್ಯ ಬಸ್ ಸೇವೆಗೆ ಅನುಮತಿ ನೀಡಲಾಗಿತ್ತು.
ರಾಜ್ಯ ಎಕ್ಸ್ಪ್ರೆಸ್ ಸಾರಿಗೆ ನಿಗಮ ಹಾಗೂ ತಮಿಳುನಾಡು ರಾಜ್ಯ ಸಾರಿಗೆ ನಿಗಮ (ಟಿಎನ್ಎಸ್ಟಿಸಿ) ದೀಪಾವಳಿ ಪ್ರಯುಕ್ತ ಮಧುರೈನಿಂದ ಚೆನ್ನೈಗೆ 100 ಕ್ಕೂ ಹೆಚ್ಚು ವಿಶೇಷ ಬಸ್ಗಳು ಸಂಚರಿಸಲಿವೆ. ಮಧುರೈನಿಂದ ಚೆನ್ನೈ, ಕೊಯಮತ್ತೂರು, ತಿರುಪುರ್ ಹಾಗೂ ನಾಗರ್ಕೊಯಿಲ್ಗೆ 125 ವಿಶೇಷ ಬಸ್ಗಳು ಚಲಿಸುತ್ತಿವೆ. ವಿಶೇಷ ಬಸ್ಗಳ ಸಂಚಾರ ಕಳೆದ ಬುಧವಾರದಿಂದ ಪ್ರಾರಂಭಿಸಲಾಗಿದ್ದು, ನವೆಂಬರ್ 16ರವರೆಗೆ ಮುಂದುವರಿಯಲಿದೆ.