ನವದೆಹಲಿ, ನ.14 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು. ಈ ಹಬ್ಬವು ಎಲ್ಲರ ಬಳಿಗೆ ಮತ್ತಷ್ಟು ಬೆಳಕು ಸಂತೋಷ ನೀಡಲಿ. ಭಗವಂತ ಎಲ್ಲರಿಗೂ ಸಮೃದ್ಧಿ ಹಾಗೂ ಆರೋಗ್ಯ ಕರುಣಿಸಲಿ" ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಶುಕ್ರವಾರ ಮಾಡಿದ್ದ ಟ್ವೀಟ್ನಲ್ಲಿ, "ಈ ಬಾರಿಯ ದೀಪಾವಳಿಯಂದು ದೇಶದ ಗಡಿಯನ್ನು ಕಾಯುವಂತ ಸೈನಿಕರಿಗೆ ದೀಪ ಬೆಳಗಿಸಿ. ದೇಶದ ಗಡಿ ಕಾಯುವ ಯೋಧರನ್ನು ಪದಗಳಿಂದ ವರ್ಣಿಸಲು ಆಗುವುದಿಲ್ಲ. ಯೋಧರ ಕುಟುಂಬದೊಂದಿಗೆ ನಾವಿದ್ದೇವೆ" ಎಂದಿದ್ದರು.
ಸಿಎಂ ಬಿಎಸ್ವೈ ಅವರು ಕೂಡಾ ಟ್ವೀಟ್ ಮೂಲಕ ಶುಭಕೋರಿದ್ದು, "ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಬೆಳಕಿನ ಹಬ್ಬ ದೀಪಾವಳಿಯು ಎಲ್ಲರ ಬಾಳಿನಲ್ಲಿ ಸಂತಸ, ಸಂಭ್ರಮಗಳನ್ನು ತರಲಿ. ಕೊರೋನಾ ಸೋಂಕಿನ ಬಗ್ಗೆ ಜಾಗ್ರತೆ ವಹಿಸಿ ಹಬ್ಬವನ್ನು ಆಚರಿಸಿ. ಆರೋಗ್ಯದ ಕಡೆಗೆ ವಿಶೇಷ ಕಾಳಜಿಯಿರಲಿ. ಸಾಂಕ್ರಾಮಿಕದ ಅಂಧಕಾರ ಬೇಗನೆ ಕಳೆದು ಆರೋಗ್ಯಪೂರ್ಣ ಹೊಂಬೆಳಕು ಬೇಗನೆ ಮೂಡಲಿ" ಎಂದಿದ್ದಾರೆ.
ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿದ್ದು, ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿ ಹಾಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು. ಕೊರೊನ ಸೋಂಕಿನ ಕುರಿತು ಸೂಕ್ತ ಜಾಗ್ರತೆ ವಹಿಸಿಸೋಣ, ಪರಿಸರಸ್ನೇಹಿ ಹಬ್ಬ ಆಚರಿಸೋಣ ಎಂದು ತಿಳಿಸಿದ್ದಾರೆ.