ನವದೆಹಲಿ, ನ.13 (DaijiworldNews/PY): ಪಶ್ಚಿಮ ಬಂಗಾಳದ ವಿವಿಧ ಪ್ರದೇಶಗಳಲ್ಲಿ ಸ್ಲೀಪರ್ ಸೆಲ್ಗಳನ್ನು ಬಳಸಿ ಉಗ್ರ ದಾಳಿಗೆ ಆಲ್ಖೈದಾ ಸಂಚು ಮಾಡಿದೆ ಎನ್ನುವ ಅಂಶವನ್ನು ಕೇಂದ್ರ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.
ಸಾಂದರ್ಭಿಕ ಚಿತ್ರ
ಕೋಲ್ಕಾತಾದ ಎನ್ಐಎ ಅಧಿಕಾರಿಗಳು ಶಿರಸಿಯಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಕೆಲಸ ಮಾಡುತ್ತಿದ್ದ ಸಯ್ಯದ್ ಎಂ.ಇದ್ರಿಸ್ ಎಂಬಾತನನ್ನು ಬಂಧಿಸಿದ ಬೆನ್ನಲ್ಲಿಯೇ ಈ ವಿಚಾರ ಬಹಿರಂಗವಾಗಿದೆ.
ಸಯ್ಯದ್ ಎಂ.ಇದ್ರಿಸ್ ಎಂಬಾತ ಹಲವಾರು ಸಾಮಾಜಿಕ ಜಾಲತಾಣಗಳ ಮುಖೇನ ಉಗ್ರ ಸಂಘಟನೆ ಲಷ್ಕರ್ಗೆ ನೇಮಕ ಮಾಡುವ ನೆಟ್ವರ್ಕ್ನಲ್ಲಿದ್ದ ಎಂದು ಆರೋಪಿಸಲಾಗಿದೆ.
ತನ್ನ ಮುನ್ನೆಚ್ಚರಿಕೆಯಲ್ಲಿ ಉಲ್ಲೇಖಿಸಿರುವ ಗುಪ್ತಚರ ಇಲಾಖೆಯು, "ಆಲ್-ಖೈದಾ ಉರ ಸಂಘಟನೆ ವಿದೇಶಿ ನೆರವಿನೊಂದಿಗೆ ಸ್ಥಳೀಯರನ್ನು ಕೂಡಾ ಪ್ರಚೋದಿಸಿ, ಹಿಂಸಾತ್ಮಕ ಕೃತ್ಯಗಳನ್ನು ಎಸಗುವ ಸಲುವಾಗಿ ವೇದಿಕೆ ತಯಾರು ಮಾಡುತ್ತಿದೆ" ಎಂದು ತಿಳಿಸಿದೆ.