ಧಾರವಾಡ,ನ.13 (DaijiworldNews/HR): ಬಿಜೆಪಿ ಪಕ್ಷವು ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಲೇ ಬರುತ್ತಿದೆ, ಇದೀಗ ಉದಾಹರಣೆ ಎಂಬಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನದ ಹಿಂದೆಯೂ ಬಿಜೆಪಿ ಇದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದ್ದಾರೆ.
ಈ ಕುರಿತು ವಿನಯ ಕುಲಕರ್ಣಿ ಅವರ ನಿವಾಸಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಜಕೀಯವಾಗಿ ಕಾಂಗ್ರೆಸ್ ಅನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮ ಪಕ್ಷ ಕಾನೂನಿಗೆ ತಲೆ ಬಾಗುತ್ತದೆ ಆದರೆ ಕಾನೂನು ಪ್ರಕಾರ ಏನು ಆಗಬೇಕು ಆಗಲಿ, ಹೆದರಿಸುವ ಕ್ರಮ ಸರಿಯಲ್ಲ ಎಂದರು.
ಇನ್ನು ಸಿಬಿಐ ಮತ್ತು ಇ.ಡಿ ಅಧಿಕಾರಿಗಳನ್ನು ಬಿಜೆಪಿ ತಮಗೆ ಬೇಕಾದಂತೆ ಉಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು, ನಾಯಕರು ವಿನಯ್ ಕುಲಕರ್ಣಿ ಜೊತೆಗಿದ್ದಾರೆ ಹಾಗಾಗಿ ಅವರು ಆದಷ್ಟು ಬೇಗ ಜೈಲಿನಿಂದ ಹೊರಗೆ ಬರುತ್ತಾರೆ ಎಂದು ಹೇಳಿದ್ದಾರೆ.