ಚಿತ್ರದುರ್ಗ,ನ.13 (DaijiworldNews/HR): ಡಿಸೆಂಬರ್ 1 ರಿಂದ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ವ್ಯಾಪ್ತಿಯ ಮೆಡಿಕಲ್ ಕಾಲೇಜುಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನ ಮೆಡಿಕಲ್ ಕಾಲೇಜು ಆರಂಭಿಸಲು ಸ್ಥಳ ಪರಿಶೀಲಿಸಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು, "ಕೊರೊನಾ ಲಸಿಕೆಯ ಪ್ರಯೋಗ ಮೂರನೇ ಹಂತದಲ್ಲಿ ನಡೆಯುತ್ತಿದ್ದು, ಶೇ.90. ರಷ್ಟು ಯಶಸ್ವಿಯಾಗಿದ್ದು, ಜನವರಿಯಿಂದ ಮಾರ್ಚ್ ವೇಳೆಗೆ ಲಸಿಕೆ ಲಭ್ಯವಾಗಬಹುದು" ಎಂದರು.
ಇನ್ನು ಕರ್ನಾಟಕದಾದ್ಯಂತ ಒಳ್ಳೆಯ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ನಿಟ್ಟಿನಲ್ಲಿ ಸರ್ಕಾರ ಈ ವರ್ಷಾಂತ್ಯದೊಳಗೆ ಚಿಕ್ಕಮಗಳೂರು, ಹಾವೇರಿ, ಯಾದಗಿರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಕಾಮಗಾರಿ ಶಂಕುಸ್ಥಾಪನೆ ಮಾಡಲಾಗುವುದು. ಅದಕ್ಕಾಗಿ ಮುಖ್ಯಮಂತ್ರಿಗಳು 50 ಕೋಟಿ ರೂ.ಅನುದಾನ ನೀಡಿರುವುದಾಗಿ ತಿಳಿಸಿದರು.