ಕಲಬುರಗಿ,ನ.13 (DaijiworldNews/HR): ರಾಜ್ಯದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮಾಡುವ ಬದಲಿಗೆ ಪುನಾರಚನೆ ಮಾಡುವುದು ಸೂಕ್ತ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ವಿ ಗುತ್ತೇದಾರ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆಯ ಬದಲು ಪುನಾರಚನೆ ಮಾಡಿದರೆ ಎಲ್ಲರಿಗೂ ಅವಕಾಶ ಸಿಗುತ್ತದೆ, ಹಾಗಾಗಿ ಈಗಾಗಲೇ ಸಚಿವರಾಗಿದ್ದವರು ಹೊಸೊಬ್ಬರಿಗೆ ಸಚಿವರಾಗಲು ಸಹಕರಿಸಬೇಕು. ಸರ್ಕಾರ ರಚನೆಯಾಗುವಲ್ಲಿ ಅನೇಕರು ಶ್ರಮಿಸಿದ್ದು, ಪಕ್ಷಕ್ಕೆ ಬಂದವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕಿದೆ ಎಂದರು.
ಇನ್ನು ಇಬ್ಬ ಸಚಿವರಿಗೆ ಎರಡು ಜಿಲ್ಲೆಗಳ ಉಸ್ತುವಾರಿ ಇರುವುದರಿಂದ ಜೊತೆಗೆ ಕೊರೊನಾ ಸಂಕಷ್ಟ ಸ್ಥಿತಿ ಇರುವುದರಿಂದ ಆಡಳಿತ ಇನ್ನಷ್ಟು ಚುರುಕುಗೊಳ್ಳಬೇಕಿದೆ ಎಂದರು.
ಆದರೆ ನನಗೆ ಯಾವುದೇ ಮಂತ್ರಿಯಾಗುವ ಆಸೆಯಿಲ್ಲ, ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಕೊಟ್ಟರೆ ಪಡೆಯುತ್ತೇನೆ ಎಂದು ಹೇಳಿದ್ದಾರೆ.