ನವದೆಹಲಿ, ನ.13 (DaijiworldNews/PY): "ವಿಶ್ವ ಆರೋಗ್ಯ ಸಂಸ್ಥೆಯು ಸಾಂಪ್ರದಾಯಿಕ ಔಷಧಿಯ ಮೇಲೆ ಡಬ್ಲ್ಯುಎಚ್ಒ ಗ್ಲೋಬಲ್ ಸೆಂಟರ್ ಅನ್ನು ಭಾರತದಲ್ಲಿ ಸ್ಥಾಪನೆ ಮಾಡಿದ್ದು, ಹೆಮ್ಮೆಯ ವಿಚಾರ" ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಆಯುರ್ವೇದ ದಿನದ ಅಂಗವಾಗಿ ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಗುಜರಾತ್ನ ಜಮ್ನಗರದಲ್ಲಿ ಹಾಗೂ ರಾಜಸ್ತಾನದ ಜೈಪುರದಲ್ಲಿ ರಾಷ್ಟ್ರೀಯ ಆಯುರ್ವೇದ ಸಂಸ್ಥೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, "ವಿಶ್ವ ಆರೋಗ್ಯ ಸಂಸ್ಥೆಯು ಸಾಂಪ್ರದಾಯಿಕ ಔಷಧಿಯ ಮೇಲೆ ಡಬ್ಲ್ಯುಎಚ್ಒ ಗ್ಲೋಬಲ್ ಸೆಂಟರ್ ಅನ್ನು ಭಾರತಲ್ಲಿ ಸ್ಥಾಪನೆ ಮಾಡಿದ್ದು, ಇದು ಇಲ್ಲಿನ ಸಾಂಪ್ರದಾಯಿಕ ಸೇರಿದಂತೆ ಆಯುರ್ವೇದ ಔಷಧಗಳ ಮೇಲೆ ಸಂಶೋಧನೆಯನ್ನು ಹೆಚ್ಚಿಸುತ್ತದೆ" ಎಂದಿದ್ದಾರೆ.
"ವಿಶ್ವ ಆರೋಗ್ಯ ಸಂಸ್ಥೆಯು ಸಾಂಪ್ರದಾಯಿಕ ಔಷಧ ಕೇಂದ್ರವನ್ನು ಸ್ಥಾಪಿಸಲು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದು ಹೆಮ್ಮೆಯ ವಿಚಾರ. ಭಾರತದಲ್ಲಿ ಸ್ಥಾಪನೆಯಾದ ಈ ಔಷಧ ಕೇಂದ್ರವು ದೊಡ್ಡ ಕೇಂದ್ರವಾಗಿ ಅಭಿವೃದ್ದಿಯಾಗಲಿ ಎಂದು ಹಾರೈಸುತ್ತೇನೆ" ಎಂದು ಹೇಳಿದ್ದಾರೆ.