ಕಾನ್ಪುರ,ನ.13 (DaijiworldNews/HR): ಹಿರಿಯ ಐಪಿಎಸ್ ಅಧಿಕಾರಿಯೊಬ್ಬರನ್ನು ಗ್ಯಾಂಗ್ಸ್ಟಾರ್ ವಿಕಾಸ್ ದುಬೆ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರ್ಕಾರ ಅಮಾನತುಗೊಳಿಸಿದೆ ಎಂದು ತಿಳಿದು ಬಂದಿದೆ.
ಕಾನ್ಪುರದ ಚೌಬೆಪುರ್ ಪ್ರದೇಶದ ಬಿಕ್ರು ಗ್ರಾಮದಲ್ಲಿ ಜುಲೈ 3 ರಂದು ಗ್ಯಾಂಗ್ಸ್ಟಾರ್ ವಿಕಾಸ್ ದುಬೆ ಬಂಧನಕ್ಕಾಗಿ ಹೋಗಿದ್ದ ಪೊಲೀಸರಲ್ಲಿ ಎಂಟು ಮಂದಿ ಹತರಾಗಿದ್ದರು, ಮತ್ತೆ ಜುಲೈ 10 ರಂದು ವಿಕಾಸ್ ದುಬೆಯನ್ನು ಎನ್ಕೌಂಟರ್ ಮಾಡಲಾಗಿದೆ.
ಇನ್ನು ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿಯೊಬ್ಬರ ಹೆಸರನ್ನು ದಾಖಲಿಸಿದ್ದ ಎಸ್ಐಟಿ ಗ್ಯಾಂಗ್ಸ್ಟಾರ್ಗೆ ನೆರವು ನೀಡಿರುವುದಾಗಿ ತಿಳಿಸಿತ್ತು. ಇದರಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರಪ್ರದೇಶ ಸರ್ಕಾರವು ಅಧಿಕಾರಿಯನ್ನು ಅಮಾನತುಗೊಳಿಸಿದೆ.