ಬೆಂಗಳೂರು, ನ. 13 (DaijiworldNews/MB) : ''ಅಳಿವಿನತ್ತ ಸಾಗುತ್ತಿರುವ ನಿಮ್ಮ ಕಂಪನಿ ಕಾಂಗ್ರೆಸ್ನ್ನು ಉಳಿಸಲು ಪ್ರಯತ್ನಿಸಿ'' ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟಾಂಗ್ ನೀಡಿದ್ದಾರೆ.
ದೇಶದ ಜಿಡಿಪಿ ಶೇಕಡಾ 8.6ರಷ್ಟು ಕುಸಿದಿದ್ದು ದೇಶದ ಇತಿಹಾಸದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ಕುಸಿತ ಉಂಟಾಗಿರುವುದು ಮೊದಲ ಬಾರಿಗೆ ಎಂಬ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿರುವ ವರದಿಯೊಂದನ್ನು ಉಲ್ಲೇಖಿಸಿ ಗುರುವಾರ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ''ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದೆ. ಮೋದಿಯವರ ಕ್ರಮಗಳು ಭಾರತವನ್ನು ದುರ್ಬಲಗೊಳಿಸಿದೆ'' ಎಂದು ಹೇಳಿದ್ದರು.
ಈ ಟ್ವೀಟ್ಗೆ ತಿರುಗೇಟು ನೀಡಿರುವ ಸಿ.ಟಿ. ರವಿ, ''ಭಾರತವನ್ನು ಮರೆತುಬಿಡಿ ಡಿಯರ್, ರಾಹುಲ್ ಗಾಂಧಿ. ನೀವು ಮತ್ತು ನಿಮ್ಮ ಕುಟುಂಬ ಎಂದಿಗೂ ಭಾರತದ ಬಗ್ಗೆ ಕಾಳಜಿ ವಹಿಸಲಿಲ್ಲ. ಈಗ ನಿಮ್ಮ ಕಂಪನಿ ಕಾಂಗ್ರೆಸ್ನ್ನು ಉಳಿಸಲು ಪ್ರಯತ್ನಿಸಿ. ಅದು ಅಳಿವಿನತ್ತ ಸಾಗುತ್ತಿದೆ'' ಎಂದು ವ್ಯಂಗ್ಯವಾಡಿದ್ದಾರೆ.