ಕಲಬುರಗಿ,ನ.13 (DaijiworldNews/HR): ಶಿರಾ ಮತ್ತು ರಾಜರಾಜ್ರ್ಶ್ವರಿ ನಗರ ಉಪಚುನಾವಣೆಯಲ್ಲಿ ಕಮಲ ಅರಳಲು ಕಾರಣ ಬಿಜೆಪಿ ಪಕ್ಷ ಎಲ್ಲಾ ಸಮುದಾಯಗಳನ್ನು ಒಂದಾಗಿ ಕಂಡಿದ್ದರಿಂದ ಸಾಧ್ಯವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜಾತಿ ಆಧಾರದ ಮೇಲೆ ರಾಜಕೀಯ ನಡೆಸುತ್ತಿದೆ, ಆದರೆ ಬಿಜೆಪಿ ಎಲ್ಲ ಸಮುದಾಯಗಳನ್ನು ಒಂದಾಗಿ ಕಂಡಿರುವುದರಿಂದ ಉಪಚುನಾವಣೆಯಲ್ಲಿ ಕಮಲ ಅರಳುವಂತಾಗಿದೆ ಎಂದರು.
ಇನ್ನು ಕರ್ನಾಟಕ ರಾಜ್ಯ ಉಪಾಧ್ಯಕ್ಷನಾದ ಬಳಿಕ ಮೊದಲ ಬಾರಿ ಕಲಬುರಗಿಗೆ ಬಂದಿದ್ದು, ಹಿಂದೆ 15 ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿದ್ದು, 15 ರಲ್ಲಿ 12 ಕ್ಷೇತ್ರದಲ್ಲಿ ಬಿಜೆಪಿ ಜಯಶಾಲಿಯಾಗಿತ್ತು ಎಂದು ಹೇಳಿದ್ದಾರೆ.