ಮುಂಬೈ, ನ.13 (DaijiworldNews/PY): ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರ ಗೆಳೆಯ ಪೌಲ್ ಬರ್ಟೆಲ್ ಅವರನ್ನು ಶುಕ್ರವಾರ ನಾರ್ಕೊಟಿಕ್ ಕಂಟ್ರೊಲ್ ವಿಭಾಗ ಬಂಧಿಸಿದೆ.
ಬಾಲಿವುಡ್ನಲ್ಲಿ ಅಪಾರ ಪ್ರಮಾಣದದಲ್ಲಿ ಹಲವು ಮಂದಿ ಡ್ರಗ್ ಉಪಯೋಗ ಮಾಡುತ್ತಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಮಾಹಿತಿ ದೊರೆತ ನಾರ್ಕೊಟಿಕ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳ ತಂಡ ನ.9ರಂದು ನಟ ಅರ್ಜುನ್ ರಾಂಪಾಲ್ ಅವರ ಮುಂಬೈಯಲ್ಲಿನ ಮನೆಯ ಮೇಲೆ ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸಿತ್ತು.
ಅರ್ಜುನ್ ರಾಂಪಾಲ್ ಅವರ ಗೆಳತಿ ಗೇಬ್ರಿಯೆಲ್ಲಾ ಡೆಮೆಟ್ರಿಯಡ್ಸ್ ಅವರು ನ.12ರಂದು ಎರಡನೇ ಬಾರಿ ನಾರ್ಕೊಟಿಕ್ ವಿಭಾಗದ ಎದುರು ವಿಚಾರಣೆಗೆ ಹಾಜರಾಗಿದ್ದು, ಅವರನ್ನು ಸತತ ಆರು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಈ ನಡುವೆ ಅರ್ಜುನ್ ರಾಂಪಾಲ್ ಅವರಿಗೂ ಕೂಡಾ ಹಾಜರಾಗುವಂತೆ ತಿಳಿಸಲಾಗಿದೆ.
ಅರ್ಜುನ್ ರಾಂಪಾಲ್ ಅವರ ಮನೆ ಮೇಲೆ ದಾಳಿ ನಡೆಸಿದ್ದ ಸಂದರ್ಭ ಅರ್ಜುನ್ ಅವರ ಬಳಸುತ್ತಿದ್ದ ಲ್ಯಾಪ್ಟಾಲ್ ಸೇರಿದಂತೆ ಮೊಬೈಲ್ ಫೋನ್ ಹಾಗೂ ಟ್ಯಾಬ್ಲೆಟ್ಸ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ಅಧಿಕಾರಿಗಳ ತಂಡ ಗೇಬ್ರಿಯಲ್ ಸೋದರ ಅಗಿಸಿಲಾಸ್ ಡೆಮೆಟ್ರಿಯಡ್ಸ್ ಅವರನ್ನು ಕಳೆದ ತಿಂಗಳು ಪುಣೆ ಜಿಲ್ಲೆಯ ಲೊನವಾಲಾದ ರೆಸಾರ್ಟ್ವೊಂದರಿಂದ ಬಂಧಿಸಿದ್ದರು.