ಪಾಟ್ನಾ,ನ.13 (DaijiworldNews/HR): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಇದು ನನ್ನ ಕೊನೆ ಚುನಾವಣೆ ಎಂದು ಹೇಳಿದ್ದು, ಇದೀಗ ಆ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನಾನು ಚುನಾವಣಾ ಪ್ರಚಾರದ ವೇಳೆ ನಾನು ಕೊಟ್ಟ ಹೇಳಿಕೆಯನ್ನು ನೀವು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ, ಪ್ರತಿ ಬಾರಿ ಕೊನೆಯ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಹೇಳುವಂತೆ ಈ ಬಾರಿಯೂ ಪತ್ರಕರ್ತರ ಜತೆ ಮಾತನಾಡುತ್ತಾ ಎಲ್ಲವೂ ಚೆನ್ನಾಗಿದ್ದರೆ ಅಂತ್ಯವೂ ಚೆನ್ನಾಗಿರುತ್ತದೆ (ಅಂತ್ ಭಲಾ ತೋ ಸಬ್ ಭಲಾ) ಎಂದು ಹೇಳಿದ್ದೆ" ಎಂದರು.
ಇನ್ನು ರ್ಯಾಲಿಯಲ್ಲಿ ಅದಕ್ಕೆ ಮುಂಚಿತವಾಗಿ ಹಾಗೂ ಬಳಿಕ ನೀತಿಶ್ ಹೇಳಿದ್ದನ್ನು ಕೇಳಿದರೆ ನಿಮಗೆ ಇಡೀ ಚಿತ್ರಣ ಅರ್ಥವಾಗುತ್ತದೆ. ಯೇ ಮೇರಾ ಅಖಿರಿ ಚುನಾವ್ ಹೈ ಎಂಬ ಹೇಳಿಕೆಯನ್ನು ವಿರೋಧ ಪಕ್ಷಗಳು ಕೊನೆಯ ಚುನಾವಣೆ ಎಂದು ಅರ್ಥೈಸಿದ್ದವು. ನಿತೀಶ್ ಕೊನೆಯ ಚುನಾವಣೆ ಎಂದು ಹೇಳಿಲ್ಲ. ಕೊನೆಯ ಚುನಾವಣಾ ಸಭೆ ಎಂದು ಹೇಳಿದ್ದರು ಎಂಬುದಾಗಿ ಜೆಡಿಯು ಸ್ಪಷ್ಟನೆ ನೀಡಿದೆ.