ಬೆಂಗಳೂರು೦,ನ.13 (DaijiworldNews/HR): ಸುಮಾರು 3 ಕೋಟಿ ರೂ.ಗಿಂತ ಅಧಿಕ ಹಾನಿಗೆ ಕಾರಣವಾದ ಬೆಂಗಳೂರಿನ ಕೆಮಿಕಲ್ ಫಾಕ್ಟರಿ ಅಗ್ನಿ ದುರಂತಕ್ಕೆ ಸಂಬಂಧಿಸಿ ರೇಖಾ ಕೆಮಿಕಲ್ಸ್ ಮತ್ತು ರೇಖಾ ಕೆಮಿಕಲ್ ಕಾರ್ಪೊರೇಶನ್ನ ರಾಸಾಯನಿಕ ಘಟಕಗಳ ಮಾಲೀಕರ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಈ ಅವಘಡಕ್ಕೆ ಸಂಬಂಧಿಸಿದಂತೆ ಬ್ಯಾಟರಾಯನಪುರ ಠಾಣೆಯಲ್ಲಿ ಈಗಾಗಲೇ ಒಂದು ಪ್ರಕರಣ ದಾಖಲಾಗಿದ್ದು, ಮಾಲೀಕರಾದ ಕಮಲಾ, ಅವರ ಪತಿ ಸಜ್ಜನ್ ರಾವ್ ಹಾಗೂ ಪುತ್ರ ಅನಿಲ್ ಎಂಬುವರನ್ನು ಬುಧವಾರ ಬಂಧಿಸಲಾಗಿದೆ.
ಇನ್ನು ಟೆಂಪೊ ಚಾಲಕ ಶಂಭುಲಿಂಗ ಎಂಬುವರು ದೂರು ನೀಡಿದ್ದು, ಅದರಂತೆ ಮಾಲೀಕರ ವಿರುದ್ಧ ಪೊಲೀಸರು ಎರಡನೇ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಂಭುಲಿಂಗ ಅವರು ಕಾರ್ಖಾನೆ ಸಮೀಪದ ರಸ್ತೆಯಲ್ಲಿ ಟೆಂಪೊ ನಿಲ್ಲಿಸಿ ಟೀ ಕುಡಿಯಲು ಹೋಗಿದ್ದು,ಆ ವೇಳೆ ಬೆಂಕಿ ಅವಘಡ ಸಂಭವಿಸಿ, ಅವರ ಟೆಂಪೊ ಸಂಪೂರ್ಣವಾಗಿ ಸುಟ್ಟು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುವುದಾಗಿ ಎಂದು ಪೊಲೀಸರು ಹೇಳಿದ್ದಾರೆ.