ನವದೆಹಲಿ, ನ.13 (DaijiworldNews/HR): ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಟ್ವೀಟರ್ನಲ್ಲಿ ಹಾಕಿದ್ದ ಪ್ರೊಫೈಲ್ ಪೋಟೊಗೆ ಕಾಪಿರೈಟ್ ವರದಿಯಾದ ಕಾರಣ ಟ್ವೀಟರ್ ಅದನ್ನು ತೆಗೆದುಹಾಕಿದೆ.
ಅಮಿತ್ ಶಾ ಅವರ ಟ್ವೀಟರ್ ಖಾತೆಯಲ್ಲಿ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿದಾಗ ಕಾಪಿರೈಟ್ ಕಾರಣದ ವರದಿಗೆ ಪ್ರತಿಕ್ರಿಯೆಯಾಗಿ ಈ ಚಿತ್ರವನ್ನು ತೆಗೆದುಹಾಕಲಾಗಿದೆ ಎಂದು ಪ್ರದರ್ಶನವಾಗುತ್ತಿತ್ತು.
ಆದರೆ ಸದ್ಯ ಕೆಲ ಸಮಯದ ಬಳಿಕ ಬೇರೊಂದು ಪೋಟೊವನ್ನು ಹಾಕಲಾಗಿದೆ.