ಡೆಹ್ರಾಡೂನ್,ನ.12 (DaijiworldNews/HR): ವೆಬ್ ಸರಣಿಯ ಮೂಲಕ ಜನಪ್ರಿಯರಾಗಿದ್ದ ನಟ ಆಸಿಫ್ ಬಸ್ರಾ ಹಿಮಾಚಲ ಪ್ರದೇಶದ ಮೆಕ್ಲಿಯೋಡ್ಗಂಜ್ನಲ್ಲಿರುವ ತಮ್ಮ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಆಸಿಫ್ ಬಸ್ರಾ ಅವರು ಪಾತಾಳ್ ಲೋಕ್ ವೆಬ್ ಸರಣಿಯ ಮೂಲಕ ಜನಪ್ರಿಯರಾಗಿದದರು.
ಬಸ್ರಾ ಅವರ ಸಾವಿಗೆ ಕಾರಣ ತಿಳಿದು ಬಂದಿಲ್ಲ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಇನು ವಿಧಿವಿಜ್ಞಾನ ತಜ್ಞರ ತಂಡ ಅವರ ನಿವಾಸಕ್ಕೆ ಆಗಮಿಸಿದೆ ಎಂದು ತಿಳಿದು ಬಂದಿದೆ.
ಆಸಿಫ್ ಬಸ್ರಾ ಹಲವಾರು ಬಾಲಿವುಡ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ.