ಮುಂಬೈ,ನ.12 (DaijiworldNews/HR): ರಾಜ್ಯದಲ್ಲಿ ಅಧಿಕಾರ ಬದಲಾವಣೆ ಬಗ್ಗೆ ಬಿಜೆಪಿ ನಿರೀಕ್ಷೆ ಇಟ್ಟುಕೊಂಡಿಲ್ಲ, ಆದರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರ ಅದಾಗಿಯೇ ಪತನವಾಗಲಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಅಧಿಕಾರ ಬದಲಾವಣೆಯಾಗಬೇಕು ಎಂಬ ಬಗ್ಗೆ ಕಾಳಜಿ ಇದೆ, ಆದರೆ ನಾವು ಈ ಬಗ್ಗೆ ನಿಗಾ ವಹಿಸಿಲ್ಲ. ಮಹಾರಾಷ್ಟ್ರ ಸರ್ಕಾರ ಒಂದಲ್ಲಾ ಒಂದು ದಿನ ತನ್ನಿಂದ ತಾನೇ ಪತನವಾಗಲಿದೆ ಎಂದರು.
ಇನ್ನು ಈ ರೀತಿಯ ಸರ್ಕಾರ ಹೆಚ್ಚು ಕಾಲ ಆಡಳಿತ ನಡೆಸುವುದಿಲ್ಲ, ಯಾವಾಗ ಈ ಸರ್ಕಾರ ಪತನವಾಗುತ್ತದೋ, ಆಗ ನಾವು ಪರ್ಯಾಯ ಸರ್ಕಾರ ರಚಿಸುತ್ತೇವೆ. ಆದರೆ ಈಗ ಅದು ನಮ್ಮ ಗುರಿಯಲ್ಲ. ಮಹಾರಾಷ್ಟ್ರದಲ್ಲಿ ತೀವ್ರ ರೀತಿಯ ಕೃಷಿ ಬಿಕ್ಕಟ್ಟು ಇದೆ. ರೈತರು ಚಿಂತೆಗೊಳಗಾಗಿದ್ದಾರೆ. ಸರ್ಕಾರ ಕೂಡಾ ಅವರಿಗೆ ಆರ್ಥಿಕ ನೆರವು ನೀಡಿಲ್ಲ. ವಿರೋಧ ಪಕ್ಷವಾಗಿ ನಾವು ರೈತರ ಜತೆಗಿದ್ದೇವೆ ಮತ್ತು ಸರ್ಕಾರದ ನಿಲುವನ್ನು ಪ್ರಶ್ನಿಸುತ್ತೇವೆ ಎಂದು ಹೇಳಿದ್ದಾರೆ.