ಮುಂಬೈ, ನ.12 (DaijiworldNews/HR): ಕೊರೊನಾ ಭೀತಿಯ ನಡುವೆಯು ಎರಡು ಜೈನ ಮಂದಿರಗಳನ್ನು ದೀಪಾವಳಿ ಸಂದರ್ಭದಲ್ಲಿ ತೆರೆಯಲು ಬಾಂಬೆ ಹೈಕೋರ್ಟ್ ಷರತ್ತಿನ ಅನುಮತಿ ನೀಡಿದೆ.
ಷರತ್ತಿನೊಂದಿಗೆ ಎರಡು ಜೈನ ಮಂದಿರ ತೆರೆಯಲು ಅನುಮತಿ ನೀಡಿದ್ದು, ಕಡಿಮೆ ಜನಸಂಖ್ಯೆಯ ಭಕ್ತರಿಗೆ ಮಾತ್ರ ಅವಕಾಶ ನೀಡಬೇಕು, ಭಕ್ತರು ದೀಪಾವಳಿಯ ಸಂದರ್ಭದಲ್ಲಿ ಭೇಟಿ ನೀಡುವಾಗ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಶ್ರೀ ಆತ್ಮ ಕಮಲ್ ಲಬ್ದಿ ಸುರೀಶ್ ವಾರ್ಜಿ ಜೈನ್ ಜ್ಞಾನ್ ಮಂದಿರ್ ಟ್ರಸ್ಟ್ ಮತ್ತು ಶೇಥ್ ಮೋಟಿಶಾ ಧಾರ್ಮಿಕ ಮತ್ತು ಚಾರಿಟೇಬಲ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಎರಡು ಜೈನ ಮಂದಿರ ತೆರೆಯಲು ಅನುಮತಿ ನೀಡಿದೆ.
ಇನ್ನು ದೀಪಾವಳಿಯಂದು ನವೆಂಬರ್ 13ರಿಂದ 17ರವರೆಗೆ ಜೈನ ಮಂದಿರಕ್ಕೆ ಭೇಟಿ ನೀಡಲು ಅನುಮತಿ ನೀಡಬೇಕೆಂದು ಟ್ರಸ್ಟ್ ಪರ ವಕೀಲ ಪ್ರಫುಲ್ಲಾ ಶಾ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು.