ಹೊಸದಿಲ್ಲಿ, ನ.12 (DaijiworldNews/HR): ಬಿಹಾರಕ್ಕೆ ಮತ್ತೆ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ರಾಜ್ಯದ ಮತದಾರರಿಗೆ ಮಾಡುವ ಅವಮಾನ ಎಂದು ಶಿವಸೇನೆ ಹೇಳಿದೆ.
ಶಿವಸೇನೆಯು ತನ್ನ ಮುಖವಾಣಿ ಸಾಮ್ನಾದಲ್ಲಿ, ನಿತೀಶ್ ಕುಮಾರ್ ಅವರು ಮತ್ತೆ ಬಿಹಾರದ ಮುಖ್ಯಮಂತ್ರಿ ಆಗಬಹುದು. ಆದರೆ ಅವರು ಬಿಜೆಪಿಯ ನಿರ್ದೇಶನದಂತೆಯೇ ಕೆಲಸ ಮಾಡಬೇಕಾಗುತ್ತದೆ. ಬಿಜೆಪಿ ಮತ್ತು ಆರ್ಜೆಡಿ ಪಕ್ಷಗಳು ಮತ ಪಡೆದಿವೆ. ಜೆಡಿಯು ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ. ಆದರೆ ಈ ಸಂಧರ್ಭದಲ್ಲಿ ನಿತೀಶ್ ಕುಮಾರ್ರನ್ನು ಬಿಹಾರದ ಮುಖ್ಯಮಂತ್ರಿಯನ್ನಾಗಿ ಮಾಡುವುದು ಮತದಾರರಿಗೆ ಮಾಡುವ ಅವಮಾನದಂತಿದೆ ಎಂದು ಸಾಮ್ನ ಸಂಪಾದಕೀಯದಲ್ಲಿ ಬರೆಯಲಾಗಿದೆ.
ಇನ್ನು ಆರ್ಜೆಡಿ ನಾಯಕ ತೇಜಸ್ವಿ ಯಾದವ್ರನ್ನು ಶ್ಲಾಘಿಸಿದ ಶಿವಸೇನೆ, ತೇಜಸ್ವಿ ಭವಿಷ್ಯ ಉಜ್ವಲವಾಗಿದ್ದು, ಅವರು ಸ್ವಲ್ಪ ಕಾಯಬೇಕು.ಬಿಜೆಪಿ ನಂಬರ್ ಗೇಮ್ನಲ್ಲಿ ಗೆದ್ದಿರಬಹುದು. ಆದರೆ ನಿಜವಾದ ವಿನ್ನರ್ 31ರ ವಯಸ್ಸಿನ ತೇಜಸ್ವಿ ಎಂದಿದೆ.