ಬೆಳಗಾವಿ, ನ.12 (DaijiworldNews/HR): ಸೇನಾಧಿಕಾರಿ ಎಂದು ನಂಬಿಸಿ ಅನೇಕ ಮಂದಿಗೆ ವಂಚಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬಂಧಿತ ವ್ಯಕ್ತಿಯನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ನಿವಾಸಿ ಮಂಜುನಾಥ ಬಿರಾದಾರ್ ಎಂದು ಗುರುತಿಸಲಾಗಿದೆ.
ಮಂಜುನಾಥ ತಾನು ಸೇನಾಧಿಕಾರಿ ಎಂದು ಹೇಳಿ ಹುತಾತ್ಮ ಸೈನಿಕರ ಕುಟುಂಬಗಳಿಗೆ ಹಣದ ವಂಚನೆ ಮಾಡುತ್ತಿದ್ದು,ಇದೇ ಹೆಸರನ್ನು ಬಳಸಿಕೊಂಡು ಐದು ಜನ ಮಹಿಳೆಯರನ್ನು ಮದುವೆಯಾಗಿ ಕೈಕೊಟ್ಟಿರೋದು ಸದ್ಯ ಪೊಲೀಸರ ತನಿಖೆ ವೇಳೆಯಲ್ಲಿ ಆರೋಪಿ ಬಾಯಿ ಬಿಟ್ಟಿದ್ದಾನೆ.
ಈತ ಕಳೆದ ಹಲವು ವರ್ಷಗಳಿಂದ ತಾನು ಸೇನಾಧಿಕಾರಿ ಎಂದು ಹೇಳಿಕೊಂಡು ಓಡಾಡುತ್ತಿದ್ದ. ರಾಜ್ಯದ ಅನೇಕ ಕಡೆಗಳಲ್ಲಿ ಮೋಸ ಮಾಡುತ್ತಿದ್ದ, ಈತ ಇತ್ತೀಚಿಗೆ ಬೆಳಗಾವಿಗೆ ಬಂದು ಅಲ್ಲಿ ಕೂಡ ಸೇನಾಧಿಕಾರಿ ಸಮವಸ್ತ್ರದಲ್ಲಿ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಡಾಡುತ್ತಿದ್ದನು. ಇದನ್ನು ಗಮಿಸಿದ ಕೆಲವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ವಿಚಾರಣೆಗೆ ಒಳಪಡಿಸಿದ ವೇಳೆಯಲ್ಲಿ ವಂಚನೆಯ ಜಾಲ ಪತ್ತೆಯಾಗಿದೆ.