ಮೈಸೂರು, ನ. 12 (DaijiworldNews/MB): ರಾತ್ರಿ ವೇಳೆ ಗಸ್ತು ಕರ್ತವ್ಯಕ್ಕೆ ತೆರಳಿದ್ದ ಪೊಲೀಸರಿದ್ದ ಜೀಪು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಪೊಲೀಸರು ದಾರುಣವಾಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕೆಆರ್ ನಗರ ತಾಲ್ಲೂಕಿನಲ್ಲಿ ತಡರಾತ್ರಿ ನಡೆದಿದೆ.
ಮೃತರು ಕೆಆರ್ ನಗರ ಪೊಲೀಸ್ ಠಾಣೆಯ ಎಎಸ್ಐ ಮೂರ್ತಿ ಮತ್ತು ಎಸ್ಬಿ (ಗುಪ್ತ ವಾರ್ತೆ) ಕರ್ತವ್ಯ ಮಾಡುತ್ತಿದ್ದ ಶಾಂತಕುಮಾರ್.
ಈ ಇಬ್ಬರು ಪೊಲೀಸರು ಬುಧವಾರ ರಾತ್ರಿ ಜೀಪ್ನಲ್ಲಿ ಸರ್ಕಲ್ ನೈಟ್ ರೌಂಡ್ ಕರ್ತವ್ಯ ಮಾಡುತ್ತಿದ್ದು ಬೆಳ್ಳಗಿನ ಜಾವ ಮೂರು ಗಂಟೆ ಸುಮಾರಿಗೆ ಅವರಿದ್ದ ಜೀಪ್ ನಿಯಂತ್ರಣ ತಪ್ಪಿ ಸಿದ್ದನ ಕೊಪ್ಪಲು ಗೇಟ್ ಸಮೀಪ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದು ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.