ಕೊಟ್ಟಾಯಂ, ನ. 12 (DaijiworldNews/MB) : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಗುರುವಾರ ಸಂಜೆಯಿಂದ ಎರಡು ದಿನಗಳ ಕಾಲ 'ಚಿತಿರಾ ಅತ್ತತಿರುಣಾಳ್' ಹಬ್ಬದ ಅಂಗವಾಗಿ ತೆರೆಯಲಿದ್ದು ಎರಡು ದಿನಗಳ ಕಾಲ ಅಯ್ಯಪ್ಪ ಸ್ವಾಮಿಗೆ ಪೂಜೆ ನಡೆಯಲಿದೆ.
ಗುರುವಾರ ಸಂಜೆ ಹೊತ್ತಿಗೆ ಮುಖ್ಯ ಅರ್ಚಕ ಕೆ ಸುಧೀರ್ ನಂಬೂತಿರಿ, ತಂತ್ರಿ ಕಂದರಾರು ರಾಜೀವಾರು ಅವರು ಗರ್ಭಗುಡಿಯನ್ನು ತೆರೆಯಲಿದ್ದಾರೆ ಎಂದು ವರದಿ ತಿಳಿಸಿದೆ.
ನಾಳೆ ಮುಂಜಾನೆಯಿಂದ ಪೂಜೆ ವಿಧಿ-ವಿಧಾನಗಳು ಆರಂಭವಾಗಲಿವೆ. ಶುಕ್ರವಾರ ಅಥಳಪೂಜೆ (ರಾತ್ರಿ ಪೂಜೆ) ನಡೆದ ಬಳಿಕ ಪುನಃ ಮುಚ್ಚಲಾಗುತ್ತದೆ.
ಇನ್ನು ಈ ಎರಡು ದಿನಗಳ ಕಾಲ ದೇವಾಲಯಕ್ಕೆ ಭಕ್ತರಿಗೆ ಆಗಮಿಸಲು ಅವಕಾಶವಿಲ್ಲ.