ಮೈಸೂರು, ನ.11 (DaijiworldNews/PY): "ನನಗೂ ಕೂಡಾ ಹಸಿರು ಪಟಾಕಿ ಎಂದರೆ ಏನು ಎನ್ನುವ ವಿಚಾರ ತಿಳಿದಿಲ್ಲ. ಈ ಬಗ್ಗೆ ತಿಳಿದ ಬಳಿಕ ಹೇಳುತ್ತೇನೆ" ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, "ನಮ್ಮ ಇಲಾಖೆಯಿಂದ ತಜ್ಞರು ದೀಪಾವಳಿಯಲ್ಲಿ ಪಟಾಕಿ ನಿಷೇಧದ ಬಗ್ಗೆ ಮಾರ್ಗಸೂಚಿ ಸಿದ್ದಪಡಿಸಿದ್ದು, ಆ ಮಾರ್ಗಸೂಚಿಯನ್ನು ಸಿಎಂ ಅವರ ಗಮನಕ್ಕೆ ತಂದಿದ್ದು, ಸಲ್ಲಿಸಿದ್ದೇನೆ. ಮಾರ್ಗಸೂಚಿಯ ಸಲ್ಲಿಕೆಯ ಬಳಿಕ ಸಿಎಂ ಬಿಎಸ್ವೈ ಅವರು ಹಸಿರು ಪಟಾಕಿ ಸಿಡಿಸಲು ಮಾತ್ರವೇ ಅನುಮತಿ ಕಲ್ಪಿಸಿದ್ದು, ಸಮಯ ಕೂಡಾ ನಿಗದಿಪಡಿಸಿದ್ದಾರೆ. ಆದರೆ, ನನಗೂ ಕೂಡಾ ಹನಸಿರು ಪಟಾಕಿ ಎಂದರೆ ಏನು ಎಂದು ತಿಳಿದಿಲ್ಲ" ಎಂದು ತಿಳಿಸಿದರು.
ಕೊರೊನಾ ಪ್ರಕರಣಗಳ ಮಾಹಿತಿ ನೀಡಿದ ಅವರು, "ಕೆಲ ಜಿಲ್ಲೆಗಳಲ್ಲಿ 15 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಪ್ರಮಾಣವು ಶೇ.19ರವರೆಗೆ ಇತ್ತು. ಆದರೆ, ಇದೀಗ ಶೇ.2ಕ್ಕೆ ತಗ್ಗಿದೆ. ಈ ನಡುವೆ ಕೊರೊನಾ ಮರಣ ಪ್ರಮಾಣ ಕೂಡಾ ಕಡಿಮೆಯಾಗಿದೆ" ಎಂದರು.