ಬೆಂಗಳೂರು, ನ.11 (DaijiworldNews/PY): "ಮಹಿಳೆಯರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಮಹಿಳೆಯ ಸುರಕ್ಷತೆಗೆ ಸರ್ಕಾರ ಸದಾ ಸಿದ್ದ" ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧ ಮುಂಭಾಗದಲ್ಲಿ ಇಂದು ನಿರ್ಭಯ ಯೋಜನೆಯಡಿ ಪೊಲೀಸ್ ಠಾಣೆಗಳಿಗೆ 751 ದ್ವಿಚಕ್ರ ವಾಹನಗಳನ್ನು ಹಸ್ತಾಂತರ ಮಾಡಿ ಮಾತನಾಡಿದ ಅವರು, "ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕ ಮಹಿಳೆಯರಿಗೆ ಅತ್ಯಂತ ಸುರಕ್ಷಿತವಾದ ತಾಣವಾಗಿದೆ" ಎಂದಿದ್ದಾರೆ.
"ಕೇಂದ್ರ ಸರ್ಕಾರವು, ಮಹಿಳೆಯ ಸುರಕ್ಷತೆಗಾಗಿ ನಿರ್ಭಯ ಯೋಜನೆಯನ್ನು ಜಾರಿ ಮಾಡಿದೆ. ಈ ಯೊಜನೆಯಡಿ, ಮಹಿಳೆಯರ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. 700 ಪೊಲೀಸ್ ಠಾಣೆಗಳಲ್ಲಿ ಸಹಾಯವಾಣಿ ಆರಂಭಿಸಲು ಕೇಂದ್ರ ಸರ್ಕಾರ 7 ಕೋಟಿ.ರೂ.ಗಳನ್ನು ನೀಡಿದೆ" ಎಂದು ತಿಳಿಸಿದ್ದಾರೆ.