ನವದೆಹಲಿ, ನ.11 (DaijiworldNews/PY): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎಗೆ ಬಹುಮತ ದೊರಕಿಸಿಕೊಟ್ಟ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಬಿಹಾರದ ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, "ಜನರ ಆಶೀರ್ವಾದದೊಂದಿಗೆ ಬಿಹಾರದಲ್ಲಿ ಪ್ರಜಾಪ್ರಭುತ್ವ ಮತ್ತೊಮ್ಮೆ ಗೆದ್ದಿದೆ. ಬಿಹಾರ ಬಿಜೆಪಿಯೊಂದಿಗೆ ಎನ್ಡಿಎಯ ಎಲ್ಲಾ ಕಾರ್ಯಕರ್ತರು ದೃಢ ನಿಶ್ಚಯ ಹಾಗೂ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಿದ್ದು, ಅದ್ಭುತವಾಗಿದೆ.ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳು ಹಾಗೂ ಬಿಹಾರದ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ" ಎಂದಿದ್ದಾರೆ.
ಅಮಿತ್ ಶಾ ಅವರು ಕೂಡಾ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದು, "ಬಿಹಾರ ಪ್ರತಿಯೊಂದು ವಿಭಾಗವೂ ಟೊಳ್ಳು ರಾಜಕೀಯ, ಜಾತಿವಾದ ಹಾಗೂ ಓಲೈಕೆಯ ರಾಜಕೀಯವನ್ನು ನಿರಾಕರಿಸಿದ್ದಲ್ಲದೇ, ಎನ್ಡಿಯ ಅಭಿವೃದ್ದಿಗೆ ಬೆಂಬಲ ನೀಡಿದ್ದಾರೆ. ಇದು ಪ್ರತಿಯೋರ್ವ ಬಿಹಾರಿಯ ಆಶಯ ಹಾಗೂ ಆಕಾಂಕ್ಷೆಗಳ ಗೆಲುವು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಅಭಿವೃದ್ದಿಯ ಡಬಲ್ ಎಂಜಿನ್ನ ಜಯ. ಬಿಹಾರದ ಬಜೆಪಿಯ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ" ತಿಳಿಸಿದ್ದಾರೆ.