ಲಕ್ನೊ, ನ. 11 (DaijiworldNews/MB) : ಉತ್ತರ ಪ್ರದೇಶದಲ್ಲಿ ನಡೆದ ಏಳು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆರು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಒಂದು ಸ್ಥಾನ ಮಾತ್ರ ಸಮಾಜವಾದಿ ಪಕ್ಷಕ್ಕೆ ದಕ್ಕಿದೆ.
ಬಿಹಾರ ವಿಧಾನಸಭೆಯ ಎರಡನೇ ಹಂತದ ಮತದಾನದ ದಿನವೇ ಉತ್ತರ ಪ್ರದೇಶದ ಏಳು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಮಂಗಳವಾರ ಬಿಹಾರದಲ್ಲಿ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು ಉತ್ತರ ಪ್ರದೇಶದಲ್ಲೂ ಮತ ಎಣಿಕೆ ನಡೆಸಲಾಗಿದೆ.
ಒಟ್ಟು 7 ಕ್ಷೇತ್ರಗಳಲ್ಲಿ ಅಮ್ರೊಹಾದಲ್ಲಿ ನೌಗೌನ್ ಸಡಟ್, ಫಿರೋಜಾಬಾದ್ ನಲ್ಲಿ ಬುಲಂಡ್ ಶಹ್ರ್, ಟುಂಡ್ಲಾ, ಕಾನ್ಪುರ ಡೆಹಟ್ ನಲ್ಲಿ ಘಟಂಪುರ್, ಉನ್ನಾವೊದಲ್ಲಿ ಬಂಗರ್ಮೌ ಮತ್ತು ಡಿಯೊರಿಯಾ ಸಡರ್ ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಸೇರಿದೆ. ಜೌನ್ಪುರದ ಮಲ್ಹಾನಿ ಕ್ಷೇತ್ರ ಸಮಾಜವಾದಿ ಪಕ್ಷದ ಪಾಲಾಗಿದೆ. ಆದರೆ ಸ್ಪರ್ಧೆಗಿಳಿದಿದ್ದ ಬಿಎಸ್ಪಿ ಮತ್ತು ಕಾಂಗ್ರೆಸ್ಗೆ ಒಂದು ಸ್ಥಾನ ಕೂಡ ದಕ್ಕಿಲ್ಲ.