ನವದೆಹಲಿ, ನ.10 (DaijiworldNews/HR): ಭಾರತೀಯ ಸಶಸ್ತ್ರಪಡೆಗಳು ಅನಿಶ್ಚಿತ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂಥ ಪರಿಸ್ಥಿತಿಯಲ್ಲಿ ನಮ್ಮ ದೇಶವನ್ನು ರಕ್ಷಿಸಿಕೊಳ್ಳಬೇಕಾದರೆ ನಮಗೆ ಅತ್ಯಂತ ಬಲವಾದ ಸಶಸ್ತ್ರ ಪಡೆಗಳ ಅಗತ್ಯವಿದೆ ಎಂದು ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಈ ಕುರಿತು ರಕ್ಷಣಾ ಮತ್ತು ಮಿಲಿಟರಿ ವಿಷಯಗಳ ಕುರಿತಾದ ಪೋರ್ಟಲ್ 'ಭರತ್ಶಕ್ತಿ ಇನ್' ಐದನೇ ವಾರ್ಷಿಕ ಸಮಾವೇಶದ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಿ, ಮಿಲಿಟರಿ ಶಕ್ತಿ ಬಲಗೊಳ್ಳಬೇಕು. ಇಲ್ಲದಿದ್ದರೆ, ನಮ್ಮ ವಿರೋಧಿಗಳು, ಇದರ ಲಾಭವನ್ನು ಪಡೆಯಬಹುದು' ಎಂದರು.
ಇನ್ನು ಶಸ್ತ್ರಾಸ್ತ್ರಗಳು ಯುದ್ಧ ಮಾಡುವುದಕ್ಕೆ ಮಾತ್ರ ಉಪಯೋಗಕ್ಕಲ್ಲ, ಬದಲಾಗಿ ನಮ್ಮ ದೇಶದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಶಸ್ತ್ರಾಸ್ತ್ರಗಳ ಅಗತ್ಯವಿದೆ ಎಂದು ಹೇಳಿದ್ದಾರೆ.