ಪಾಟ್ನಾ, ನ.10 (DaijiworldNews/HR): ಮೇವು ಹಗರಣ ಪ್ರಕರಣದಲ್ಲಿ ಜೈಲಿನಲ್ಲಿರುವ ಲಾಲು ಪ್ರಸಾದ್ ಯಾದವ್ ಅವರ ವಿಚಾರಣೆಯನ್ನು ಜಾರ್ಖಂಡ್ ಹೈಕೋರ್ಟ್ ನ.27ಕ್ಕೆ ಮುಂದೂಡಿದೆ.
ಮೇವು ಹಗರಣ ಪ್ರಕರಣದಲ್ಲಿ ಉತ್ತರವನ್ನು ಸಲ್ಲಿಸಲು ಸಿಬಿಐ ಹೆಚ್ಚಿನ ಸಮಯವನ್ನು ಕೋರಿದ್ದರಿಂದ ವಿಚಾರಣೆಯನ್ನು ನ. 27 ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಲಾಲು ಪ್ರಸಾದ್ ಯಾದವ್ ಅವರು ಕಳೆದ ಎರಡು ವರ್ಷದಿಂದ ಬಂಧನದಲ್ಲಿದ್ದು, ನಾಲ್ಕು ದಶಕಗಳಲ್ಲಿಯೇ ಮೊದಲ ಬಾರಿಗೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಾಗಲಿಲ್ಲ.
ಇನ್ನು ನವೆಂಬರ್ 9 ರಂದು ತಂದೆ ಜೈಲಿನಿಂದ ಹೊರಬಂದು ಮರುದಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿದಾಯ ಎಂದು ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಚುನಾವಣಾ ಮೆರವಣಿಗೆಗಳಲ್ಲಿ ಹೇಳುತ್ತಿದ್ದರ, ಆದರೆ ಅವರಿಗೆ ಜಾಮೀನು ಮಂಜುರಾಗಲಿಲ್ಲ.