ಬೆಂಗಳೂರು,ನ.10 (DaijiworldNews/HR): ಮತದಾರರೆಂದಿಗೂ ಬರೀ ಕಣ್ಣೀರಿಗೆ ಕರಗುವುದಿಲ್ಲ ಎಂದು ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಮುನಿರತ್ನ ಅವರೌ ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ ಟಾಂಗ್ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರೋಧಿ ಅಭ್ಯರ್ಥಿ ಕುಸುಮಾ ಅವರು ನಿಜ ಮಾತನಾಡಬೇಕು. ಕೊನೆ ಕ್ಷಣದಲ್ಲಿ ನಾನು ಆಡದ ಮಾತನ್ನು ಆಡಿದ್ದೇನೆ ಎಂದು ಹೇಳಿ ಅಪಪ್ರಚಾರ ಮಾಡಿದ್ದರು, . ಆದರೆ, ನಾನು ಎಂದೂ ಹೆಣ್ಣು ಮಕ್ಕಳು ವಿರುದ್ದ ಮಾತನಾಡಲಿಲ್ಲ ಎಂದರು.
ರಾಜರಾಜೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾರರು ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡಿಕ್ಕಾಗಿ, ಧನ್ಯವಾದಗಳು. ಚಾಮುಂಡೇಶ್ವರಿ ತಾಯಿ ಮೇಲೆ ಆಣೆಗೂ ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದಾರೆ.
ಇನ್ನು ಮೊದಲ ಚುನಾವಣೆಯಲ್ಲಿ 17 ಸಾವಿರ ಮತಗಳಿಂದ, ಎರಡನೇ ಚುನಾವಣೆಯಲ್ಲಿ 26 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದೆ. ಈ ಬಾರಿ 57 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದೇನೆ. ನನ್ನ ಗೆಲುವಿಗೆ ಕಾರಣರಾದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್, ಸಚಿವರು, ಶಾಸಕರಿಗೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.