ಪಟ್ನಾ,ನ.10 (DaijiworldNews/HR): ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಯು ಒಂದು ಕೋಟಿಯಷ್ಟು ಮಾತ್ರ ಎಣಿಕೆ ಮಾಡಲಾಗಿದ್ದು, ಇನ್ನು ಅಪಾರ ಪ್ರಮಾಣದಲ್ಲಿ ಮತ ಎಣಿಕೆ ಬಾಕಿ ಇದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಹಾರದ ಮುಖ್ಯ ಚುನಾವಣಾ ಆಯುಕ್ತ ಎಚ್ ಆರ್ ಶ್ರೀನಿವಾಸ್, 50 ಸುತ್ತುಗಳಷ್ಟು ಮತ ಎಣಿಕೆ ಮಾಡಬೇಕಾದ ಅನೇಕ ಕ್ಷೇತ್ರಗಳಿದ್ದು, 4 ಕೋಟಿ 10 ಲಕ್ಷ ಮಂದಿ ಮತಚಲಾಯಿಸಿದ್ದಾರೆ. ಈಗಾಗಲೇ 95 ಲಕ್ಷ ಮತಗಳನ್ನು ಎಣಿಕೆ ಮಾಡಿದ್ದು, ಮತ ಎಣಿಕೆಯು ಇಂದು ಸಂಜೆಯ ಬಳಿಕವೂ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಇನ್ನು ಮತಎಣಿಕೆಯು ಇದುವರೆಗೂ ಯಾವುದೇ ಅಡೆತಡೆಗಳಿಲ್ಲದೆ ನಡೆದಿದ್ದು, ಒಟ್ಟು 30 ರಿಂದ 35 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. 20-25 ಸುತ್ತುಗಳ ಮತ ಎಣಿಕೆ ಇನ್ನೂ ಬಾಕಿ ಇದೆ. ಸುಮಾರು 166 ಕ್ಷೇತ್ರಗಳಲ್ಲಿ ಮತಗಳ ಅಂತರ 5000ಕ್ಕೂ ಕಡಿಮೆ ಇದೆ ಎಂದರು.