ಮೈಸೂರು, ನ.10 (DaijiworldNews/PY): "ಸಿದ್ದರಾಮಯ್ಯರಿಗೆ ನಮ್ಮ ಪಕ್ಷದ ಬಗ್ಗೆ ನಮಗಿಂತ ಹೆಚ್ಚಾಗಿ ತಿಳಿಯುತ್ತಿದೆ. ಅವರು ಬಿಜೆಪಿಯೊಂದಿಗೆ ಕೈ ಜೋಡಿಸಲು ಸಿದ್ದರಾಗಿರಬಹುದು" ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರಿಗೆ ನಮ್ಮ ಪಕ್ಷದ ಮಾಹಿತಿ ನಮಗಿಂತ ಹೆಚ್ಚು ತಿಳಿಯುತ್ತಿದೆ. ಆದರೆ, ಈ ಬಗ್ಗೆ ಅವರಿಗೆ ಯಾವ ಮೂಲದಿಂದ ಮಾಹಿತಿ ತಿಳಿಯುತ್ತಿದೆ ಎಂದು ಗೊತ್ತಿಲ್ಲ. ಬಹುಶಃ ಅವರು ನಮ್ಮ ಕೇಂದ್ರದ ನಾಯಕರ ಸಂಪರ್ಕದಲ್ಲಿರಬಹುದು" ಎಂದು ಲೇವಡಿ ಮಾಡಿದ್ದಾರೆ.
ಉಪಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ಬಿಜೆಪಿ ಶಿರಾ ಹಾಗೂ ಆರ್.ಆರ್.ನಗರ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಮುಖ್ಯಮಂತ್ರಿ ಆಗಿದ್ದ ಸಂದರ್ಭ ಸಿದ್ದರಾಮಯ್ಯ ಅವರು ಮಾಡಿದ್ದೇನು?. ಅವರು ನಂಜನಗೂಡು, ಚಾಮರಾಜನಗರ ಉಪಚುನಾವಣೆ ಹೇಗೆ ಗೆಲುವು ಸಾಧಿಸಿದರು?" ಎಂದು ಕೇಳಿದ್ದಾರೆ.