ನವದೆಹಲಿ, ನ.10 (DaijiworldNews/PY): "ರಾಹುಲ್ ಗಾಂಧಿ ಅವರಿಗೆ ತೇಜಸ್ವಿ ಯಾದವ್ ಅವರು ಕರೆ ಮಾಡಿ ಮರ್ ಗಯೇ ಭಾಯ್ ಎನ್ನುತ್ತಾರೆ" ಎಂದು ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ ವ್ಯಂಗ್ಯವಾಡಿದ್ದಾರೆ.
ಬಿಹಾರ ಚುನಾವಣೆಯ ಪ್ರಕ್ರಿಯೆಯು ಮುಂದುವರೆದಿದ್ದು, ಈ ನಡುವೆ ಟ್ವೀಟ್ ಮಾಡಿರುವ ಅವರು, "ಎಂಜಿಬಿ ಮರ್ ಗಯೆ ಭಾಯ್. ನಾನೂ ಈ ಮಾತನ್ನು ಗಂಭೀರವಾಗಿಯೇ ಹೇಳುತ್ತಿದ್ದೇನೆ. ಜೈಲು ಹಾಗೂ ಜಾಮೀನಿನ ವಿಚಾರವನ್ನು ಜನರು ಇಷ್ಟು ಬೇಗ ಮರೆಯುತ್ತಾರೆಯೇ ಎಂದು ಹೇಗೆ ಭಾವಿಸುತ್ತಾರೆ? ಇದೆಲ್ಲಾ ಆದ ಬಳಿಕ ಅವರು ಜಂಗಲ್ ರಾಜ್ಯಕ್ಕೆ ತೆರಳುತ್ತಾರೆ" ಎಂದಿದ್ದಾರೆ.