ಬೆಂಗಳೂರು, ನ. 10 (DaijiworldNews/MB) : ''ಮತದಾರರ ತೀರ್ಪಿಗೆ ನಾವೆಂದಿಗೂ ತಲೆಬಾಗುತ್ತೇವೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಆರ್.ಆರ್. ನಗರ ಮತ್ತು ಶಿರಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನತ್ತ ಸಾಗಿದ್ದು ಕಾಂಗ್ರೆಸ್ ಹಿನ್ನಡೆಯಲ್ಲಿದೆ.
ಈ ಹಿನ್ನೆಲೆಯಲ್ಲಿ ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಮತ ಎಣಿಕೆ ಮುಗಿಯಲು ಇನ್ನೂ ಕೂಡಾ ಒಂದೂವರೆಗೆ ಗಂಟೆಯಿದೆ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ಕಾದು ನೋಡೋಣ. ಮತದಾರರ ತೀರ್ಪಿಗೆ ನಾವೆಂದಿಗೂ ತಲೆ ಬಾಗುತ್ತೇವೆ'' ಎಂದು ಹೇಳಿದರು.