ಮುಂಬೈ,ನ.10 (DaijiworldNews/HR): ರಿಪಬ್ಲಿಕ್ ಸುದ್ದಿ ವಾಹಿನಿಯ ನೆಟ್ವರ್ಕ್ನ ಸಹಾಯಕ ಉಪಾಧ್ಯಕ್ಷ ಘನಶ್ಯಾಮ್ ಸಿಂಗ್ ಅವರನ್ನು ನಕಲಿ ಟಿಆರ್ಪಿ ಹಗರಣದಲ್ಲಿ ಇಂದು ಬೆಳಗ್ಗೆ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ರಿಪಬ್ಲಿಕ್ ಟಿವಿಯ ನೆಟ್ವರ್ಕ್ನ ಸಹಾಯಕ ಘನಶ್ಯಾಮ್ ಸಿಂಗ್ ಅವರ ವಿರುದ್ಧ ನಕಲಿ ಟಿಆರ್ಪಿ ಹಗರಣದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ನು ಇದೇ ರಿಪಬ್ಲಿಕ್ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ತಾಯಿ ಮಗನ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಪ್ರಸ್ತುತ 7 ನೇ ದಿನ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಘನಶ್ಯಾಮ್ ಸಿಂಗ್ ಅವರಿಗೆ ಕಂಪನಿ ವಹಿಸಿಕೊಟ್ಟ ಗೌಪ್ಯ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡಿದ್ದು, ವಿವಿಧ ಟಿವಿ ಚಾನೆಲ್ ನಡುವೆ ಲಾಭಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದಾಗಿ ವಿವಿಧ ಜಾಹೀರಾತುದಾರರು ಮತ್ತು ಅವರ ಏಜೆನ್ಸಿಗಳಿಗೆ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.