ಬಾಗಲಕೋಟೆ,ನ.10 (DaijiworldNews/HR): ಅಬ್ ಕೀ ಬಾರ್ ಟ್ರಂಪ್ ಸರ್ಕಾರ ಎಂದು ಪ್ರಧಾನಿ ಮೋದಿ ಹೇಳಿದ್ದರು, ಆದರೆ ಅಮೇರಿಕಾದಲ್ಲಿ ಮೋದಿ ಆಟ ಏನೂ ನಡೆದಿಲ್ಲ. ಈಗ ಬೈಡನ್ ಗೆಲುವು ಸಾಧಿಸಿದ್ದಾರೆ ಎಂದು ಮಾಜಿ ಸಿಎಂ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೇರಿಕಾ ಚುನಾವಣೆಯಲ್ಲಿ ಮೋದಿಯಿಂದ ಓಟ್ಗಳು ಬಂದಿಲ್ಲ, ಅಲ್ಲಿ ಭಾರತೀಯರು ಹೆಚ್ಚಾಗಿ ಬೈಡನ್ಗೆ ಮತ ಹಾಕಿದ್ದಾರೆ. ಬಿಹಾರ ಚುನಾವಣೆ ಕುರಿತು ನಾನು ಶಾಸ್ತ್ರ, ಭವಿಷ್ಯ ಹೇಳಲ್ಲ. ಆದರೆ ಮಾಹಿತಿ ಪ್ರಕಾರ ಲಾಲುಪ್ರಸಾದ ಯಾದವ ಅವರ ಘಟಬಂಧನ್ ಗೆಲ್ಲುತ್ತದೆ ಎಂದಿದೆ. ಆದರೆ ಮೂರು ಬಾರಿ ಸಿಎಂ ಆದರೂ ನಿತೀಶ ಏನೂ ಕೆಲಸ ಮಾಡಿಲ್ಲ ಎಂದರು.
ಇನ್ನು ಬಿಹಾರದ ಜನ ಬದಲಾವಣೆ ಬಯಸುತ್ತಿದ್ದಾರೆ. ಬಿಹಾರ ಚುನಾವಣೆ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ ಎನ್ನಲು ಆಗಲ್ಲ. ಮೋದಿ ಅಲೆ ಎಲ್ಲಿಯೂ ಇಲ್ಲ. ಶಿರಾ, ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ನಾನು ಹಳ್ಳಿ ಹಳ್ಳಿಗೆ ಹೋದಾಗ ಕಣ್ಣಾರೆ ನೋಡಿದ್ದೇನೆ. ಜನರ ಒಲುವು ಕಾಂಗ್ರೆಸ್ ಪರ ಇತ್ತು ಎಂದು ಹೇಳಿದ್ದಾರೆ.