ನವದೆಹಲಿ, ನ.10 (DaijiworldNews/PY): ಹಣಕಾಸು ಆಯೋಗದ ಅಧ್ಯಕ್ಷ ಎನ್ ಕೆ ಸಿಂಗ್ ಅವರು 2021-22 ರಿಂದ 2025-26ರ ವರೆಗಿನ ಅವಧಿಯ ಕೊರೊನಾ ಸಮಯದಲ್ಲಿ ಶೀರ್ಷಿಕೆಯ ಆಯೋಗದ ವರದಿಯನ್ನು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರಿಗೆ ಸಲ್ಲಿಸಿದ್ದಾರೆ.
ಅ.30 ರೊಳಗೆ 2021-22ರಿಂದ 2025-26ವರೆಗಿನ ಐದು ವರ್ಷಗಳವರೆಗಿನ ಅವಧಿಗೆ ಶಿಫಾರಸ್ಸುಗಳನ್ನು ಆಯೋಗಕ್ಕೆ ನೀಡಲು ಸೂಚಿಸಲಾಗಿತ್ತು.
2020-21ನೇ ಸಾಲಿನ ಶಿಫಾರಸುಗಳನ್ನು ಒಳಗೊಂಡ ತನ್ನ ವರದಿಯನ್ನು ಕಳೆದ ವರ್ಷ ಆಯೋಗ ಸಲ್ಲಿಸಿದ್ದು, ಇದನ್ನು ಕೇಂದ್ರ ಸರ್ಕಾರ ಅಂಗೀಕಾರ ಮಾಡಿತ್ತು. ಅಲ್ಲದೇ, 2020ರ ಜ.30 ರಂದು ಸಂಸತ್ತಿನಲ್ಲಿ ಆ ವರದಿಯನ್ನು ಮಂಡಿಸಿತ್ತು. ಇನ್ನು ಆಯೋಗಕ್ಕೆ ಸೂಚನೆ ನೀಡಿರುವ ಸರ್ಕಾರ ವಿಶಿಷ್ಟ ಹಾಗೂ ವ್ಯಾಪಕ ವಿಷಯಗಳ ಬಗ್ಗೆ ತನ್ನ ಶಿಫಾರಸುಗಳನ್ನು ನೀಡುವಂತೆ ತಿಳಿಸಿತ್ತು. ಸ್ಥಳೀಯ ಸರ್ಕಾರದ ಅನುದಾನ ಸೇರಿದಂತೆ ತೆರಿಗೆ ಹಂಚಿಕೆ, ಸ್ಥಳೀಯ ಸರ್ಕಾರದ ಅನುದಾನ, ವಿಪತ್ತು ನಿರ್ವಹಣಾ ಅನುದಾನದ ಹೊರತಾಗಿ, ವಿದ್ಯುತ್ ಕ್ಷೇತ್ರ, ನೇರ ಹಣ ವರ್ಗಾವಣೆ ಅಳವಡಿಸಿಕೊಳ್ಳುವುದು, ಘನತ್ಯಾಜ್ಯ ನಿರ್ವಹಣೆ ಮುಂತಾದ ಹಲವು ಕ್ಷೇತ್ರಗಳಲ್ಲಿ ರಾಜ್ಯಗಳ ಕಾರ್ಯಕ್ಷಮತೆ ಪ್ರೋತ್ಸಾಹಿಸುವ ವಿಚಾರವಾಗಿ ಶಿಫಾರಸು ಮಾಡುವಂತೆ ಕೂಡಾ ಸರ್ಕಾರ ಆಯೋಗಕ್ಕೆ ಸೂಚನೆ ನೀಡಿತ್ತು.
ಈ ಸಂದರ್ಭ, ಆಯೋಗದ ಸದಸ್ಯರಾದ ಅಜಯ್ ನಾರಾಯಣ್ ಜಾ, ಪ್ರೊಫೆಸರ್ ಅನೂಪ್ ಸಿಂಗ್, ಡಾ.ಅಶೋಕ್ ಲಾಹಿರಿ ಮತ್ತು ಡಾ.ರಮೇಶ್ ಚಂದ್, ಆಯೋಗದ ಕಾರ್ಯದರ್ಶಿ ಅರವಿಂದ್ ಮೆಹ್ತಾ ಉಪಸ್ಥಿತರಿದ್ದರು.