ಪಾಟ್ನ, ನ. 10 (DaijiworldNews/MB) : ದೇಶದಲ್ಲೇ ಭಾರೀ ಕುತೂಹಲ ಮೂಡಿಸಿರುವ ಬಿಹಾರ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಇಂದು 8 ಗಂಟೆಗೆ ಆರಂಭವಾಗಿದ್ದು ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣಗಳು ದೊರೆಯುವ ನಿರೀಕ್ಷೆಗಳಿವೆ.
ಪ್ರಸ್ತುತ ಅಂಚೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಆರ್ಜೆಡಿ 53 ಕ್ಷೇತ್ರ, ಬಿಜೆಪು 40, ಜೆಡಿಯು 17, ಕಾಂಗ್ರೆಸ್ 19, ಸಿಪಿಐ (ಎಂಎಲ್) 7, ಎಲ್ಜೆಪಿ 5 ಕ್ಷೇತ್ರದಲ್ಲಿ ಮುನ್ನೆಡೆಯಲ್ಲಿದೆ.
ಬಿಹಾರದಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆದಿದ್ದು ಶೇ.56ರಷ್ಟು ಮತದಾನವಾಗಿದೆ. ಒಟ್ಟು 3,755 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಹುಮತಕ್ಕೆ 122 ಕ್ಷೇತ್ರಗಳ ಗೆಲುವು ಅಗತ್ಯವಾಗಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟ ಹಾಗೂ ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ-ಕಾಂಗ್ರೆಸ್ ಹಾಗೂ ಇತರ ಮೂರು ಪಕ್ಷಗಳನ್ನು ಒಳಗೊಂಡ ಮಹಾಘಟ ಬಂಧನ್ ಮಧ್ಯೆ ನೇರಾ ಹಣಾಹಣಿ ಇದ್ದು ಪ್ರಸ್ತುತ ಮಹಾಘಟಬಂಧನ್ ಮುನ್ನಡೆಯಲ್ಲಿದೆ. ಎನ್ಡಿಎ 61 ಕ್ಷೇತ್ರದಲ್ಲಿ ಎಂಜಿಬಿ 84 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.