ಚೆನ್ನೈ,ನ.09 (DaijiworldNews/HR): ತಮಿಳುನಾಡಿನ ಮೀನುಗಾರರ 100 ಯಾಂತ್ರೀಕೃತ ದೋಣಿಗಳು ಶ್ರೀಲಂಕಾದ ವಶದಲ್ಲಿದ್ದು, ಅದನ್ನು ಬಿಡುಗಡೆ ಮಾಡಿಸಬೇಕು, ಇಲ್ಲದಿದ್ದರೆ ತಮಿಳುನಾಡು ಸರ್ಕಾರದಿಂದ ದೋಣಿ ಮಾಲೀಕರಿಗೆ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ವೈಕೊ, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಮಾತನಾಡಿದ ವೈಕೊ, ಶ್ರೀಲಂಕಾ ನ್ಯಾಯಾಲಯ ಮೀನುಗಾರರಿಂದ ವಶಪಡಿಸಿಕೊಂಡ 121 ದೋಣಿಗಳನ್ನು ನಾಶಮಾಡಲು ಆದೇಶಿಸಿದೆ. ಇದು ಆಘಾತಕಾರಿ ಸಂಗತಿಯಾಗಿದೆ. ಶ್ರೀಲಂಕಾ ವಶದಲ್ಲಿರುವ 100ಕ್ಕೂ ಹೆಚ್ಚು ದೋಣಿಗಳಲ್ಲಿ, 88 ರಾಮೇಶ್ವರಂಗೆ ಸೇರಿವೆ ಎಂದು ವೈಕೊ, ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ಬರೆದಿದ್ದಾರೆ.
ಇನ್ನು ಭಾರತ ಸರ್ಕಾರ, ಶ್ರೀಲಂಕಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ದೋಣಿಗಳನ್ನು ಬಿಡಿಸಬೇಕು. ಇಲ್ಲವೇ ದೋಣಿಯ ವಾರಸುದಾರರಿಗೆ ತಮಿಳುನಾಡು ಸರ್ಕಾರದಿಂದ ಪರಿಹಾರ ಕೊಡಿಸಬೇಕೆಂದು ಪ್ರಧಾನಿಯವರಿಗೆ ಬರೆದ ಉಲೇಖಿಸಿದ್ದಾರೆ.