ನವದೆಹಲಿ,ನ.09 (DaijiworldNews/HR): ವಾರಾಣಸಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
ಮೂಲಸೌಕರ್ಯ,ಕೃಷಿ, ಪ್ರವಾಸೋದ್ಯಮ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದು, ಈ ಯೋಜನೆಗಳ ಒಟ್ಟು ಮೊತ್ತ 614 ಕೋಟಿ ಎಂದು ಪ್ರಧಾನಿಮಂತ್ರಿಗಳ ಕಚೇರಿ ತಿಳಿಸಿದೆ.
ಉದ್ಘಾಟಿಸಿದ ಬಳಿಕ ಯೋಜನೆಗಳ ಫಲಾನುಭವಿಗಳ ಜತೆ ಮೋದಿ ಮಾತುಕತೆಸಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಈ ಸಂದರ್ಭದಲ್ಲಿ ಹಾಜರಾಗಿದ್ದರು.
ಇನ್ನು ಉದ್ಘಾಟನೆಗೊಂಡ ಯೋಜನೆಗಳಲ್ಲಿ ರಾಮನಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಆಸ್ಪತ್ರೆ ನವೀಕರಣ ಅಲ್ಲದೆ ಒಳಚರಂಡಿ ಕಾಮಗಾರಿಗಳು, ಗೋವುಗಳ ರಕ್ಷಣೆಗೆ ಮೂಲ ಸೌಕರ್ಯ, ಸಂಪೂರ್ಣಾನಂದ ಕ್ರೀಡಾಂಗಣದಲ್ಲಿ ಆಟಗಾರರಿಗೆ ವಸತಿ ಸಂಕೀರ್ಣ ಒಳಗೊಂಡಿದೆ.