ಹೈದರಾಬಾದ್, ನ.09 (DaijiworldNews/PY): ಮೆಗಾಸ್ಟಾರ್ ಚಿರಂಜೀವಿ ಅವರಿಗೂ ಕೊರೊನಾ ದೃಢಪಟ್ಟಿದ್ದು, ಈ ಬಗ್ಗೆ ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಕೊರೊನಾ ವರದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಆದರೆ, ನನಗೆ ಕೊರೊನಾದ ಯಾವುದೇ ಗುಣಲಕ್ಷಣಗಳಿಲ್ಲ. ಸದ್ಯ ನಾನು ಹೋಂ ಕ್ವಾರಂಟೈನ್ ಆಗಿದ್ದೇನೆ. ಕಳೆದ 4-5 ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿರುವ ಪ್ರತಿಯೊಬ್ಬರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಆಚಾರ್ಯ ಚಿತ್ರದ ಶೂಟಿಂಗ್ನ ಮುನ್ನ ಚಿರಂಜೀವಿ ಅವರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಕೊರೊನಾ ವರದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.