ಅಯೋಧ್ಯೆ, ನ.09 (DaijiworldNews/HR): ಕೊರೊನಾ ಕಾರಣದಿಂದ ಈ ಬಾರಿ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ವರ್ಚುವಲ್ ದೀಪೋತ್ಸವಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಕಚೇರಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿರ್ದೇಶನದ ಮೇರೆಗೆ ಈ ವರ್ಷದ ವರ್ಚುವಲ್ ದೀಪೋತ್ಸವಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಕಾರಣದಿಂದಾಗಿ ಅಯೋಧ್ಯೆಗೆ ಬರಲಾಗದವರು ವೆಬ್ಸೈಟ್ ಮೂಲಕ ದೀಪ ಬೆಳಗಲು ಅವಕಾಶವಿದೆ' ಎಂದು ತಿಳಿಸಿದೆ.
ಅಯೋಧ್ಯೆಯಲ್ಲಿ ಇದೇ ಮೊದಲ ಬಾರಿಗೆ ದೀಪೋತ್ಸವ ಆಯೋಜಿಸಲಾಗುತ್ತಿದ್ದು,ಕಳೆದ 500 ವರ್ಷಗಳಿಂದ ಬಾಕಿ ಇರುವ ಕಾರ್ಯಕ್ರಮ ಇದಾಗಿದೆ ಎಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಸಚಿವ ನೀಲಕಂಠ ತಿವಾರಿ ಹೇಳಿದ್ದಾರೆ.