ಕೋಲ್ಕತ್ತ, ನ.09 (DaijiworldNews/PY): ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ತೃಣಮೂಲ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದು, "ತಮ್ಮ ಮಾರ್ಗಗಳನ್ನು ಮುಂದಿನ ತಿಂಗಳಲ್ಲಿ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಅವರ ಕೈ, ಕಾಲು, ತಲೆ ಹಾಗೂ ಎಲುಬುಗಳು ಮುರಿದು ಹೋಗುತ್ತವೆ" ಎಂದಿದ್ದಾರೆ.
ಪೂರ್ವ ಮಿಡ್ನಾಪುರ ಜಿಲ್ಲೆಯ ಹಲ್ದಿಯಾ ಪಟ್ಟಣದಲ್ಲಿ ನಡೆದ ರ್ಯಾಲಿಯ ಸಂದರ್ಭ ಮಾತನಾಡಿದ ಅವರು, "ಕೇಂದ್ರವು ಮುಂದಿನ ವರ್ಷ ಎಪ್ರಿಲ್-ಮೇ ತಿಂಗಳಿನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಸಲು ಅನುವು ಮಾಡಿಕೊಡಲಿದೆ. ಕೇಂದ್ರ ಸರ್ಕಾರ ನಿಮ್ಮೊಂದಿಗಿದೆ ಎಂದು ನಾನು ಭರವಸೆ ನೀಡುತ್ತೇನೆ" ಎಂದಿದ್ದಾರೆ.
"ಕಿಡಿಗೇಡಿತನ ಮಾಡುವ ಮಮತಾ ಅವರ ಜನರಿಗೆ ಹೇಳುತ್ತಿದ್ದೇನೆ, ತಮ್ಮ ಮಾರ್ಗಗಳನ್ನು ಮುಂದಿನ ತಿಂಗಳಿನಲ್ಲಿ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಅವರ ಕೈ, ಕಾಲು, ತಲೆ ಹಾಗೂ ಎಲುಬುಗಳು ಮುರಿದು ಹೋಗುತ್ತವೆ. ನೀವು ಮನೆಗೆ ಹೋಗುವ ಮೊದಲು ಆಸ್ಪತ್ರೆಗಳಿಗೆ ಹೋಗಬೇಕಾಗುತ್ತದೆ. ಅವರು ಕಿಡಿಗೇಡಿತನವನ್ನು ಹೆಚ್ಚು ಮಾಡಿದರೆ, ಅವರನ್ನು ಸ್ಮಶಾನಕ್ಕೆ ಕಳುಹಿಸಲಾಗುತ್ತದೆ" ಎಂದು ಹೇಳಿದ್ದಾರೆ.