ತಿರುವನಂತಪುರ, ನ.09 (DaijiworldNews/PY): ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಟೆಲಿಜೆನ್ಸ್ ಘಟಕವು ಮೂವರು ಪ್ರಯಾಣಿಕರಿಂದ ಸುಮಾರು 1322.67 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದೆ.
ಸಾಂದರ್ಭಿಕ ಚಿತ್ರ
ಮೂವರೂ ಕೂಡಾ ಗುದನಾಳದಲ್ಲಿಟ್ಟುಕೊಂಡು ಚಿನ್ನ ಸಾಗಣೆ ಮಾಡಲು ಯತ್ನಿಸಿದ್ದು, ಇದನ್ನು ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಟೆಲಿಜೆನ್ಸ್ ಘಟಕವು ವಶಪಡಿಸಿಕೊಂಡಿದೆ ಎಂದು ಕೊಚ್ಚಿಯ ಕಸ್ಟಮ್ಸ್ ಕಮಿಷನರೇಟ್ ಮಾಹಿತಿ ನೀಡಿದ್ದಾಗಿ ಸುದ್ದಿಸಂಸ್ಥೆಯೊಂದು ಟ್ವೀಟ್ ಮಾಡಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.