ಪಾಟ್ನ,ನ.09 (DaijiworldNews/HR): ಬಿಹಾರದಲ್ಲಿ ಚುನಾವಣೆ ನಡೆದಿದ್ದು, ಅದರ ಫಲಿತಾಂಶದ ದಿನದಂದು ನಡೆಯುವ ಸಂಭ್ರಮಾಚರಣೆ ವೇಳೆ ತನ್ನ ಪಕ್ಷದ ಕಾರ್ಯಕರ್ತರು ಯಾವುದೇ ರೀತಿಯ ಅನುಚಿತ ರೀತಿಯಲ್ಲಿ ವರ್ತಿಸುವುದನ್ನು ಆರ್ಜೆಡಿ ಪಕ್ಷವು ಸಹಿಸುವುದಿಲ್ಲವೆಂದು ಎಚ್ಚರಿಕೆ ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಆರ್ಜೆಡಿ, ನವೆಂಬರ್ 10ರಂದು ಚುನಾವಣಾ ಫಲಿತಾಂಶ ಏನೇ ಇರಲಿ. ಅದನ್ನು ಕಾರ್ಯಕರ್ತರು ಸಂಪೂರ್ಣ ಸಂಯಮ ಹಾಗೂ ಸೌಜನ್ಯದಿಂದ ಸ್ವೀಕರಿಸಬೇಕು' ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿಸುವುದು, ಗಾಳಿಯಲ್ಲಿ ಗುಂಡು ಹಾರಿಸಿ ವಿಜಯೋತ್ಸವ ಆಚರಿಸುವುದು ಮತ್ತು ಪ್ರತಿಸ್ಪರ್ಧಿಗಳೊಂದಿಗೆ ಕಾರ್ಯಕರ್ತರು ಅನುಚಿತವಾಗಿ ವರ್ತಿಸುವುದನ್ನು ಸಹಿಸಲಾಗುವುದಿಲ್ಲ ಎಂದು ತಿಳಿಸಿದೆ.
ಇನ್ನು ಮತದಾನೋತ್ತರ ಸಮೀಕ್ಷೆಗಳ ಪ್ರಕಾರ, ಆರ್ಜೆಡಿ ನೇತೃತ್ವದ ಮಹಾಘಟಬಂಧನವು ಗೆಲ್ಲುವ ಸಾಧ್ಯತೆ ಹೆಚ್ಚಿದೆ.