ನವದೆಹಲಿ, ನ. 08 (DaijiworldNews/HR): ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ನಡೆಸಲು ಮುಂದಾದಾಗ ಆಕೆ ನಿರಾಕರಿಸಿದಕ್ಕೆ ವ್ಯಕ್ತಿಯೋರ್ವ ಆಕೆಗೆ ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅತ್ಯಾಚಾರ ನಡೆಸಲು ಮುಂದಾದ ಕೃಷ್ಣ ಗುಪ್ತ (21) ಎಂಬ ಯುವಕ ಇದೀಗ ಜೈಲು ಸೇರಿದ್ದಾನೆ. ಮೈ ತುಂಬ ಸುಟ್ಟ ಗಾಯಗಳಿಂದ ನರಳುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.
ಈ ಘಟನೆ ನವೆಂಬರ್ 6ರಂದು ನಡೆದಿದ್ದು, ಯುವಕನು ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದ. ಆದರೆ, ಆಕೆ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಳು. ಇದರಿಂದ ಕೋಪಗೊಂಡ ಆತ ಆಕೆಯ ಮೇಲೆ ಪೆಟ್ರೋಲ್ ಚೆಲ್ಲಿ, ಬೆಂಕಿ ಹಚ್ಚಿದ್ದ. ಸುಟ್ಟ ಗಾಯಗಳಿಂದ ಗಾಯಗೊಂಡಿದ್ದ ಯುವತಿಯನ್ನು ವಾರಾಣಸಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕಿಯ ತಂದೆ ನೀಡಿದ ದೂರಿನ ಅನ್ವಯ ಕೃಷ್ಣ ಗುಪ್ತ ವಿರುದ್ಧ ಐಪಿಸಿ, ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ.