ಪಿರಿಯಾಪಟ್ಟಣ, ನ.08 (DaijiworldNews/PY): "ಬಿಜೆಪಿ ನಡೆ ಪಂಚಾಯತ್ಗಳ ಕಡೆಗೆ ಎನ್ನುವಂತ ಉದ್ದೇಶದ ಮೇರೆಗೆ ಕಾರ್ಯನಿರ್ವಹಿಸಲಾಗುತ್ತದೆ" ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಪಿರಿಯಾಪಟ್ಟಣದಲ್ಲಿ ಮಾತನಾಡಿದ ಅವರು, "ನಮ್ಮ ಚುನಾವಣೆಗಳಿಗಾಗಿ ನಾವು ಹೇಗೆ ತಯಾರು ಮಾಡಿಕೊಳ್ಳುತ್ತಿದ್ದೆವೋ, ಅದೇ ರೀತಿಯಾಗಿ ನಮಗಾಗಿ ದುಡಿದ ಕಾರ್ಯಕರ್ತರ ಚುನಾವಣೆಗೂ ಕೂಡಾ ನಾವು ದುಡಿಯಬೇಕಾಗಿದೆ ಎನ್ನುವ ತೀರ್ಮಾನವನ್ನು ಮಾಡಿದ್ದೇವೆ" ಎಂದಿದ್ದಾರೆ.
"ಕಾರ್ಯಕರ್ತರು ನಮಗಾಗಿ ದುಡಿದಿದ್ದಾರೆ. ಈ ನಿಟ್ಟಿನಲ್ಲಿ ಅವರ ಚುನಾವಣೆಗೂ ಕೂಡಾ ನಾವು ಅದೇ ರೀತಿಯಾಗಿ ಶ್ರಮವಹಿಸಬೇಕು. ಪಕ್ಷವನ್ನು ಬೇರಿನ ಮಟ್ಟದಿಂದ ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶವಾಗಿದೆ" ಎಂದು ತಿಳಿಸಿದ್ದಾರೆ.
"ಗ್ರಾಮ ಪಂಚಾಯತ್ ಚುನಾವಣೆಯನ್ನು ಶೀಘ್ರವೇ ಘೋಷಣೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ನಮಗಾಗಿ ಶ್ರಮವಹಿಸಿ ದುಡಿದ ಕಾರ್ಯಕರ್ತರು ಗೆಲುವು ಸಾಧಿಸಬೇಕು ಎನ್ನುವ ಸಲುವಾಗಿ ಶ್ರಮವಹಿಸಲಿದ್ದೇವೆ" ಎಂದಿದ್ದಾರೆ.