ನವದೆಹಲಿ,ನ. 08 (DaijiworldNews/HR): ಭಾರತ-ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ 8ನೇ ಸುತ್ತಿನ ಮಾತುಕತೆ ಚುಶುಲ್ ನಲ್ಲಿ ಏರ್ಪಟ್ಟಿದ್ದು, ಭಾರತ-ಚೀನಾ ಗಡಿ ಪ್ರದೇಶಗಳ ನಿಯಂತ್ರಣ ರೇಖೆಯ ಉದ್ದಕ್ಕೂ ಸೇನೆಯನ್ನು ನಿಷ್ಕ್ರಿಯಗೊಳಿಸುವಿಕೆಯ ಬಗ್ಗೆ ರಚನಾತ್ಮಕ ಅಭಿಪ್ರಾಯಗಳ ವಿನಿಮಯವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಭಾರತ ಮತ್ತು ಚೀನಾ ನಡುವಿನ ಈ ಸಭೆಯಲ್ಲಿ ಲಡಾಕ್ ಗಡಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಒತ್ತು ನೀಡಲಾಯಿತು. ಈ ಮೂಲಕ ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಭಾತೃತ್ವವನ್ನು ಜಂಟಿಯಾಗಿ ನಿರ್ವಹಿಸಲು ಸಹಮತ ವ್ಯಕ್ತಪಡಿಸಲಾಯಿತು ಎಂದು ಕೇಂದ್ರ ಸರ್ಕಾರ ಹೇಳಿದೆ.
ಇನ್ನು ಎರಡೂ ದೇಶಗಳ ನಡುವೆ ಸದ್ಯದಲ್ಲಿಯೇ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.