ನವದೆಹಲಿ, ನ.08 (DaijiworldNews/PY): 2021ನೇ ಜನವರಿ 1ರಿಂದ ದೇಶದಾದ್ಯಂತ ಎಲ್ಲಾ ಚತುಶ್ಚಕ್ರ ವಾಹನಗಳಿಗೆ ಫಾಸ್ಟಾಗ್ ಕಡ್ಡಾಯಗೊಳಿಸಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಶನಿವಾರ ಆದೇಶ ಹೊರಡಿಸಿದೆ.
"ಇದು 2017ರ ಡಿ.1ರ ಮುನ್ನ ಮಾರಾಟವಾದಂತ ವಾಹನಗಳಿಗೆ ಅನ್ವಯವಾಗಲಿದೆ. ವಾಹನವು ಫಾಸ್ಟಾಗ್ ಅನ್ನು ಹೊಂದಿದಲ್ಲಿ ಮಾತ್ರವೇ ಫಿಟ್ನೆಸ್ ಪ್ರಮಾಣ ಪತ್ರವನ್ನು ನವೀಕರಿಸಲು ಸಾಧ್ಯ" ಎಂದು ಸಚಿವಾಲಯ ಹೇಳಿದೆ.