ನವದೆಹಲಿ, ನ.08 (DaijiworldNews/PY): ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಶಾಲಿಯಾಗಿರುವ ಜೊ ಬಿಡೆನ್ ಹಾಗೂ ಉಪಾಧ್ಯಕ್ಷೆಯಾಗಿರುವ ಕಮಲಾ ಹ್ಯಾರಿಸ್ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಅವರು, "ಜೊ ಬಿಡೆನ್ ಅವರಿಗೆ ಅಭಿನಂದನೆಗಳು. ನೀವು ಉಪಾಧ್ಯಕ್ಷರಾಗಿದ್ದ ಸಂದರ್ಭ ಭಾರತ-ಅಮೇರಿಕಾದ ಸಂಬಂಧಗಳನ್ನು ಬಲಪಡಿಸುವುದಕ್ಕೆ ನಿಮ್ಮ ಕೊಡುಗೆ ನಿರ್ಣಾಯಕ ಹಾಗೂ ಅಮೂಲ್ಯವಾದುದು. ಭಾರತ-ಅಮೇರಿಕಾದ ಬಾಂಧವ್ಯವನ್ನು ಮತ್ತಷ್ಟು ಉತ್ತಮಗೊಳಿಸಲು ಜೊತೆಯಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
"ಕಮಲಾ ಹ್ಯಾರಿಸ್ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಸಾಧನೆ ಯಶಸ್ಸಿನ ಹಾದಿಯಾಗಿದೆ. ಇದು ಎಲ್ಲಾ ಭಾರತೀಯ ಅಮೇರಿಕನ್ನರಿಗೂ ಅಪಾರ ಹೆಮ್ಮೆಯ ವಿಷಯವಾಗಿದೆ. ನಿಮ್ಮ ಬೆಂಬಲ ಹಾಗೂ ನಾಯಕತ್ವದೊಂದಿಗೆ ಭಾರತ-ಅಮೇರಿಕಾದ ಸಂಬಂಧಗಳು ಇನ್ನಷ್ಟು ಬಲಗೊಳ್ಳಲಿವೆ ಎಂದು ನನಗೆ ವಿಶ್ವಾಸವಿದೆ" ಎಂದಿದ್ದಾರೆ.