ಮುಂಬೈ, ನ.08 (DaijiworldNews/PY): ನ.8ರಿಂದ ನ.22ರ ತನಕ ಬಾಂಬೆ ಹೈಕೋರ್ಟ್ನಲ್ಲಿ ದೀಪಾವಳಿ ರಜೆ ಇರಲಿದ್ದು, ಈ ಸಮಯದಲ್ಲಿ ಅತ್ಯಂತ ತುರ್ತು ವಿಚಾರಗಳಿಗೆ ಸಂಬಂಧಿಸಿದಂತ ಭೌತಿಕ ವಿಚಾರಗಳನ್ನು ಮಾತ್ರ ನಡೆಸಲಿವೆ.
ದೀಪಾವಳಿಯ ಹಿನ್ನೆಲೆ ಎರಡು ವಾರ ರಜೆಯ ಸಂದರ್ಭ, ಎರಡು ವಿಭಾಗೀಯ ಪೀಠಗಳು ಹಾಗೂ ಎರಡು ಏಕ ಸದಸ್ಯ ಪೀಠ ವಿಚಾರಣೆ ಮಾಡಿದರೆ, ಎರಡನೇ ವಾರದಂದು ಒಂದು ವಿಭಾಗೀಯ ಪೀಠ ಸೇರಿದಂತೆ ಎರಡು ಏಕ ಸದಸ್ಯ ಪೀಠ ವಿಚಾರಣೆ ನಡೆಸಲಿದೆ ಎಂದು ಅಧಿಕೃತ ನೋಟಿಸ್ ತಿಳಿಸಿದೆ.
ರಜೆಯ ಸಂದರ್ಭ ನಡೆಯಲಿರುವ ವಿಚಾರಣೆಗಳಿಗೆ ತನ್ನ ನೋಟಿಸ್ನಲ್ಲಿ ಬಾಂಬೆ ಹೈಕೋರ್ಟ್ ಮಾರ್ಗಸೂಚಿಗಳನ್ನು ನೀಡಿದೆ.
ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ನಾಯಕ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅನರ್ಬ್ ಗೋಸ್ವಾಮಿ ಅವರ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೊರ್ಟ್ ತೀರ್ಪು ಕಾಯ್ದಿರಿಸಿದೆ. ಈ ನಡುವೆ ದೀಪಾವಳಿ ಹಿನ್ನೆಲೆ ಬಾಂಬೆ ಹೈಕೋರ್ಟ್ಗೆ ಎರಡು ವಾರಗಳವರೆಗೆ ರಜೆ ಇರಲಿದ್ದು, ಅರ್ನಬ್ಗೆ ಜೈಲು ವಾಸ ಮುಂದುವರೆಯಲಿದೆ.